ಕೋವಿಡ್ ಕಾಳಜಿ ಕೇಂದ್ರದಿಂದ ಬಡ ಜನರಿಗೆ ಅನುಕೂಲ

7-Saunshi-1,,,,
Published on

ಸಂಶಿ: ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಬಾಲಕಿ ಪ್ರೌಢಶಾಲೆಯಲ್ಲಿ ತೆರೆದ ಕೋವಿಡ್ ಕಾಳಜಿ ಕೇಂದ್ರವನ್ನು ಶಾಸಕಿ ಕುಸುಮಾವತಿ ಶಿವಳ್ಳಿ ಸೋಮವಾರ ಉದ್ಘಾಟಿಸಿದರು.

ಎಪಿಎಂಸಿ ಸದಸ್ಯ ಎ.ಬಿ. ಉಪ್ಪಿನ ಮಾತನಾಡಿ, ಕರೊನಾ ಹಾವಳಿಯಿಂದ ಜನರಿಗೆ ಬೆರಳ ತುದಿಯಲ್ಲಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರ ಆರಂಭಿಸಿದ್ದು, ಬಡಜನರಿಗೆ ಅನುಕೂಲವಾಗಿದೆ ಎಂದರು.

ಇಲ್ಲಿನ ಕೋವಿಡ್ ಕಾಳಜಿ ಕೇಂದ್ರಕ್ಕೆ ಸೂಕ್ತ ಹಾಸಿಗೆಗಳನ್ನು ಪೂರೈಸುವಂತೆ ಹುಬ್ಬಳ್ಳಿಯ ಸ್ವರ್ಣ ಗ್ರುಪ್ ಮಾಲೀಕರಾದ ವಿ.ಎಸ್.ವಿ ಪ್ರಸಾದ ಅವರಲ್ಲಿ ಮನವಿ ಮಾಡಲಾಗಿತ್ತು. ತಕ್ಷಣವೇ ಸ್ಪಂದಿಸಿದ ಅವರು 20 ಬೆಡ್, ಬೆಡ್ ಶೀಟ್ ಹಾಗೂ ತಲೆದಿಂಬುಗಳನ್ನು ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಪಿಡಿಒ ಎಸ್.ವಿ. ಕಾಯಕದ ಮಾತನಾಡಿ, ಗ್ರಾಮದಲ್ಲಿ ಆರಂಭಿಸಿದ ಕೋವಿಡ್ ಕಾಳಜಿ ಕೇಂದ್ರದಲ್ಲಿ ಸೋಂಕಿತರಿಗೆ 25 ಹಾಸಿಗೆಗಳ ವ್ಯವಸ್ಥೆ ಮಾಡಿದ್ದು, ಜತೆಗೆ ಊಟ, ವಸತಿಗೆ ಸಂಬಂಧಿಸಿದ ಅಗತ್ಯ ಸೌಲಭ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಎನ್.ಎನ್. ಪಾಟೀಲ, ಗ್ರಾಪಂ ಅಧ್ಯಕ್ಷೆ ಮಂಜುಳಾ ಪಾಳೇದ, ಉಪಾಧ್ಯಕ್ಷ ಶಂಕ್ರಪ್ಪ ಬ್ಯಾಹಟ್ಟಿ, ಸದಸ್ಯರು, ತಾಪಂ ಮಾಜಿ ಸದಸ್ಯ ಜೆ.ಬಿ. ಉಪ್ಪಿನ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net