ಕೊಳ್ಳೇಗಾಲ ಕ್ರೀಡಾಂಗಣಕ್ಕೆ ಜಯಣ್ಣ ಹೆಸರು ನಾಮಕರಣ

Oplus_131072
Oplus_131072
Published on

ಯಳಂದೂರು: ಕೊಳ್ಳೇಗಾಲದ ಮಹದೇಶ್ವರ ಕಾಲೇಜಿನ ಬಳಿ ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಮಾಜಿ ಶಾಸಕ ದಿ.ಎಸ್. ಜಯಣ್ಣ ಅವರ ಹೆಸರಿಡಲು ಕ್ರಮ ವಹಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ವಡಗೆರೆ ಗ್ರಾಮದಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಎಸ್.ಜಯಣ್ಣರವರ 75ನೇ ಜನ್ಮದಿನ ಹಾಗೂ ಲೋಕಸಭಾ ಸದಸ್ಯ ಸುನೀಲ್ ಬೋಸ್ ಸಂಸದರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್.ಜಯಣ್ಣ ಜನಾನುರಾಗಿಯಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದು ಶಾಸಕನಾಗಿ ಮೊದಲ ಬಾರಿಗೆ ಸ್ಪರ್ಧಿಸಿದ್ದೆ. ನನಗೆ ಕ್ಷೇತ್ರದ ಕಾಂಗ್ರೆಸ್‌ನ ಕಾರ್ಯಕರ್ತರ ಪರಿಚಯ ಮಾಡಿಸಿಕೊಟ್ಟರು. ಆಗ ನನಗೆ 52 ಸಾವಿರ ಮತಗಳು ಬಂದಿತ್ತು. ನಂತರದ ಚುನಾವಣೆಯಲ್ಲಿ ನನಗೆ 1.08 ಲಕ್ಷ ಮತಗಳು ಬಂದು ನಾನು ಭಾರಿ ಅಂತರದಿಂದ ಗೆದ್ದೆ. ಈ ಗೆಲುವಿನಲ್ಲಿ ಜಯಣ್ಣರವರ ಪಾತ್ರ ಮುಖ್ಯವಾಗಿತ್ತು ಎಂದು ಸ್ಮರಿಸಿದರು.

ಈಗಾಗಲೇ ಕೊಳ್ಳೇಗಾಲ ಕ್ರೀಡಾಂಗಣಕ್ಕೆ 3 ಕೋಟಿ ರೂ.ಅನುದಾನವನ್ನು ಮುಖ್ಯಮಂತ್ರಿ ನೀಡಿದ್ದಾರೆ. ಇನ್ನಷ್ಟು ಅನುದಾನ ತಂದು ಇದನ್ನು ಪೂರ್ಣಗೊಳಿಸಿ ಇದಕ್ಕೆ ಜಯಣ್ಣ ಅವರ ಹೆಸರಿಡಲಾಗುವುದು. ಜಯಣ್ಣ ಅವರನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರ, ಕೊಳ್ಳೇಗಾಲ ಹಾಗೂ ಯಳಂದೂರಿನಲ್ಲಿ ಅದ್ದೂರಿಯಾಗಿ ಆಚರಿಸಲು ಯೋಜನೆ ರೂಪಿಸಬೇಕು. ಇದಕ್ಕೆ ಸಹಕಾರ ನೀಡುತ್ತೇನೆ ಎಂದರು.

ಜೇತವನ ಬುದ್ಧ ವಿಹಾರದ ಮನೋರಖ್ಖಿತ ಭಂತೇಜಿ, ನಳಂದ ಬುದ್ಧವಿಹಾರದ ಬೋಧಿರತ್ನ ಭಂತೇಜಿ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ವಡಗೆರೆ ಡಾ.ವಿ.ಎನ್.ಮಹದೇವಯ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ವಡಗೆರೆ ದಾಸ್, ಉದಯ್‌ಕುಮಾರ್. ಪಿ.ಸಂಘಸೇನ, ಕಮಲ್‌ನಾಗರಾಜು, ಭಾಗ್ಯಾ, ಆರ್.ಸುಮಿತ್ರಾ, ಮರಿಸ್ವಾಮಿ, ಹೊನ್ನೂರು ರಾಜೇಂದ್ರ, ಸುಂದರ್ ಕಲಿವೀರ್, ಸಿ.ಶಂಕರ, ಸಿದ್ದರಾಜು, ಸಿಪಿಐ ಶ್ರೀಕಾಂತ್, ಪಿಎಸ್‌ಐ ಆಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net