

ಚಿತ್ರದುರ್ಗ: ರಾಜ್ಯದ ಕೊಳೆಗೇರಿ ನಿವಾಸಿಗಳಿಗೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆ ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಶಾಖೆಯ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರ ಉದ್ಯೋಗ ಖಾತ್ರಿ ಜಾರಿ ಸೇರಿ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಕರ್ನಾಟಕ ಸಮಗ್ರ ಸ್ಲಂ ಅಭಿವೃದ್ಧಿ ಕಾಯ್ದೆ 2018ರ ಕರಡು ಜಾರಿಗೊಳಿಸಬೇಕು. ವಸತಿ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಬೇಕು. ಕೊಳೆಗೇರಿ ನಿವಾಸಿಗಳ ಜನಸಂಖ್ಯೆ ಅನುಗುಣವಾಗಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಕೊಳೆಗೇರಿ ನಿವಾಸಿಗಳಿಗೆ ಭೂ ಒಡೆತನ ನೀಡಬೇಕು. ಪ್ರತ್ಯೇಕ ಸಚಿವಾಲಯ ರಚಿಸಬೇಕು. ಅಭಿವೃದ್ಧಿ ನಿಗಮ ಜಾರಿಗೆ ತರಬೇಕು ಎಂದು ಕೋರಿದರು.
ಶಾಖೆಯ ಪದಾಧಿಕಾರಿಗಳಾದ ಕೆ.ರಾಜಣ್ಣ, ಟಿ.ಮಂಜಣ್ಣ, ಮಹೇಶ್, ಮಾಲತಿ, ಜಗದೀಶ್, ಭಾಗ್ಯಮ್ಮ, ಮಂಜುನಾಥ,
ಮಂಜಮ್ಮ, ವರಲಕ್ಷ್ಮಿ, ರಶ್ಮಾ, ನೇತ್ರಾ ಇತರರಿದ್ದರು.