ಕೊಳದಲ್ಲಿ ಮುಳುಗಿ ಇಬ್ಬರ ಸಾವು

20-GPT-2
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರು ಕೊಳಕ್ಕೆ ಮುಳುಗಿ ಮೃತಪಟ್ಟಿದ್ದಾರೆ.

ಗ್ರಾಮದ ಕಾರ್ತಿಕ್ (26) ಹಾಗೂ ವಿನೋದ್ (31) ಮೃತರು. ಭಾನುವಾರ ರಾತ್ರಿ ಕೊಳದ ಪಕ್ಕದಲ್ಲಿರುವ ವೈನ್ ಷಾಷ್‌ನಲ್ಲಿ ಕಾರ್ತಿಕ್, ವಿನೋದ್ ಹಾಗೂ ದಿಲೀಪ ಎಂಬುವರು ಮದ್ಯಪಾನ ಮಾಡಿ ನೀರಿಗೆ ಧುಮುಕಿದ್ದಾರೆ. ಇಬ್ಬರಿಗೂ ಈಜು ಬಾರದೆ ಮುಳುಗಿ ಸಾವಿಗೀಡಾದರೆ ಮತ್ತೊಬ್ಬ ಸುರಕ್ಷಿತವಾಗಿ ಹೊರಬಂದಿದ್ದಾನೆ.

ತೆರಕಣಾಂಬಿ ಠಾಣೆಯ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ಮೃತದೇಹಗಳನ್ನು ಹೊರತೆಗೆಸಿದರು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವಗಳನ್ನು ಕುಟುಂಬಸ್ಥರಿಗೆ ನೀಡಲಾಯಿತು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net