ಕೊಳಚೆಯಲ್ಲಿಯೇ ಸಂತೆ ವ್ಯಾಪಾರ

ydg04
Published on

ದೋರನಹಳ್ಳಿ: ಅತ್ತ ಮುಂದೆ ಸರಿದರೆ ಹೆದ್ದಾರಿ ಹಿಂದೆ ಸರಿದರೆ ಕೊಳಚೆಯಲ್ಲಿ ಕೂರಬೇಕು ಹೀಗೆ ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆಯಂತಾದ ಸಂತೆ ವ್ಯಾಪಾರಿಗಳು. ಇದು ದೋರನಹಳ್ಳಿಯಲ್ಲಿ ಸೋಮವಾರ ಸಂತೆಯಲ್ಲಿ ಕಂಡು ಬಂದ ದೃಶ್ಯ.

ಈ ಸಂತೆಗೆ ಶಹಾಪುರ, ಸಗರ್, ಹಳಿಸಗರ್, ಗೋಗಿ, ಭೀಗುಡಿ, ಚಾಮನಾಳ, ಖಾನಾಪುರ, ಗುಂಡಳ್ಳಿ, ಬಿದರಾಣಿ, ಇಬ್ರಾಹಿಂಪುರ, ಕನ್ಯಾಕೋಳುರು, ಶಿರವಾಳ, ಬೇವಿನಹಳ್ಳಿ, ದೋರನಹಳ್ಳಿ ತಾಂಡಾ ಸೇರಿ ಸ್ಥಳೀಯ ದೋರನಹಳ್ಳಿ ಗ್ರಾಮದ ವ್ಯಾಪಾರಿಗಳು ವ್ಯಾಪಾರಕ್ಕೆ ಬರುತ್ತಾರೆ.

ಆದರೆ ಈ ಎಲ್ಲಾ ವ್ಯಾಪಾರಿಗಳಿಗೂ ಸರಿಯಾದ ಸ್ಥಳವಿರದೆ ಒದ್ದಾಡುವಂತಾಗಿದೆ. ಅಲ್ಲದೆ ಗ್ರಾಪಂನ ದಿವ್ಯ ನಿರ್ಲಕ್ಷö್ಯದಿಂದ ಸ್ವಚ್ಛತೆ ಎಂಬುದು ಗ್ರಾಮದಲ್ಲಿ ಮರಿಚಿಕೆಯಾಗಿದೆ. ಹೀಗಾಗಿ ಹೆದ್ದಾರಿಗೆ ಹೊಂದಿಕೊAಡೆ ವಾರದ ಸಂತೆ ನಡೆಯುತ್ತಿದೆ. ಆ ಸ್ಥಳದಲ್ಲಿಯೇ ಆಟೋಗಳು ನಿಲ್ಲುತ್ತವೆ, ಹಲವು ಕೈ ಬಂಡಿಗಳು ಇರುತ್ತವೆ. ನಿತ್ಯವೂ ಅಲ್ಲಿ ಬಿಸಾಡುವ ತ್ಯಾಜ್ಯ ತೆರವು ಮಾಡದೆ ಹಾಗೆ ಬಿಟ್ಟ ಕಾರಣ ಅಲ್ಲಿ ಮಳೆ ನೀರು ನಿಂತು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಅಲ್ಲಿಯೇ ವ್ಯಾಪಾರಿಗಳು ಅತ್ತ ಮುಂದೆ ಸರಿದರೆ ಹೆದ್ದಾರಿ ಹಿಂದೆ ಬಂದರೆ ಕೊಳಚೆ ಇದ್ದ ಕಾರಣ ಸಂತೆ ವ್ಯಾಪಾರ ಮಾಡಲು ವ್ಯಾಪಾರಿಗಳು ಬಹಳ ಕಷ್ಟಪಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net