ಕೊಳಕು ಮುಚ್ಚಿ ಬಡತನ ಹೊಳೆಯುತ್ತಿಲ್ಲ

0702Klb01
Published on

ಕಲಬುರಗಿ: ಎಷ್ಟೇ ಪ್ರಕಾಶಿಸಿ, ನಮ್ಮ ಕೊಳಕು ಮುಚ್ಚಿ ಹೊಳೆದರೂ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ. ಜನ ಹೊಟ್ಟೆ ತುಂಬಿಕೊಳ್ಳಲು ಪರದಾಡುತ್ತಿದ್ದು, ಆಹಾರ ಹಕ್ಕು ಇದ್ದರೂ ಒಪ್ಪತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ಆಗುತ್ತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜೆ.ಚಲಮೇಶ್ವರ ಕಳವಳ ವ್ಯಕ್ತಪಡಿಸಿದರು.

ನಗರದ ಎಸ್.ಎಂ.ಪAಡಿತ ರಂಗಮAದಿರದಲ್ಲಿ ಶುಕ್ರವಾರ ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮ ವಾರ್ಷಿಕೋತ್ಸವ ನಿಮಿತ್ತ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿಎಸ್‌ಐ ವಿದ್ಯಾರ್ಥಿ ಸಂಘಟನೆ, ಎಐಡಿವೈಒ ಯುವಜನ ಸಂಘಟನೆ ಹಾಗೂ ಎಐಎಂಎಸ್‌ಎಸ್ ಮಹಿಳಾ ಸಂಘಟನೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೂರು ದಿನದ ಸಾಂಸ್ಕೃತಿಕ ಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಡತನ ನಿರ್ಮೂಲನೆ ಆದ್ಯತೆ ಆಗುತ್ತಿಲ್ಲ. ಮಾತಷ್ಟೇ ನಡೆದಿದ್ದು, ಹೊಟ್ಟೆ ತುಂಬುತ್ತಿಲ್ಲ. ಹಲವು ನೋವು, ಕಷ್ಟಗಳಿದ್ದರೂ ಪ್ರಕಾಶಮಾನದ ಮಾತುಗಳನ್ನಾಡುತ್ತಿz್ದೆÃವೆ. ಚಿಕ್ಕವಿದ್ದಾಗ ದೇಶದಲ್ಲಿ ಶೇ.೮೦ ಮನೆಗೆ ವಿದ್ಯುತ್ ಇರಲಿಲ್ಲ. ಮೊಬೈಲ್, ಇಂಟರ್‌ನೆಟ್ ಕಲ್ಪನೆಯೇ ಇರಲಿಲ್ಲ. ಇಂದು ಎಲ್ಲೆಡೆ ವಿದ್ಯುತ್, ಮೊಬೈಲ್ ಇದ್ದರೂ ಬಡತನ ನೀಗಿಲ್ಲ ಎಂದರು.

ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಶಿವಗಂಗಾ ರುಮ್ಮಾ ಮಾತನಾಡಿ, ದೇಶದಲ್ಲಿ ವಿಷಮ ಪರಿಸ್ಥಿತಿ ಇದೆ. ಜನರನ್ನು ಧರ್ಮದ ಹೆಸರಲ್ಲಿ ಪ್ರತ್ಯೇಕಿಸುವ, ಭೇದ ಬಿತ್ತಲಾಗುತ್ತಿದೆ. ಪರ್ಯಾಯ ಸಂವಿಧಾನದ ಪ್ರಯತ್ನ ನಡೆದಿದ್ದು, ಭವಿಷ್ಯದಲ್ಲಿ ಉದ್ಯೋಗಗಳು ಕಡಿತವಾಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾನ್ಯ ಜನರಿಗೆ ಉದ್ಯೋಗ ಸÊಷ್ಟಿಯ ಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರವು ೨೦೧೯ರಿಂದ ೨೦೨೩ರ ಅವಧಿಯಲ್ಲಿ ಉದ್ಯಮಿಗಳ ೧೪.೫೬ ಲP್ಷÀ ಕೋಟಿ ರೂ.ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ರಾಜ್ಯ ಸರ್ಕಾರ ತೆರಿಗೆ ರೂಪದಲ್ಲಿ ೩.೯೬ ಲP್ಷÀ ಕೋಟಿ ರೂ.ಪಾವತಿಸಿದ್ದರೆ ವಾಪಸ್ ರಾಜ್ಯಕ್ಕೆ ೧.೭೦ ಲP್ಷÀ ಕೋಟಿ ರೂ. ಹಂಚಿಕೆಯಾಗಿದೆ. ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳು ಪುನರ್ ಹಂಚಿಕೆಯಾದರೆ ಉತ್ತರ ಪ್ರದೇಶ, ಬಿಹಾರದಲ್ಲಿ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.

ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ ಮಾತನಾಡಿ, ಶಿಕ್ಷಣ ನೈತಿಕವಾಗಿ ದಾರಿ ಬಿಟ್ಟಿದ್ದು, ಇತಿಹಾಸದ ಪಠ್ಯಕ್ರಮದಲ್ಲಿ ಸಶಸ್ತç ಹೋರಾಟ ನಡೆಸಿದವರನ್ನು ಹಿಂಸಾವಾದಿಗಳೆAದು ಬಿಂಬಿಸಲಾಗುತ್ತಿದೆ. ನೇತಾಜಿ, ಭಗತ್‌ಸಿಂಗ್, ಖುದಿರಾಂ ಬೋಸ್ ಅವರಂತ ನಾಯಕರ ಪಾತ್ರಗಳನ್ನು ಹೇಗೆ ಅಲ್ಲಗಳೆಯಬೇಕು ಎಂದು ಪ್ರಶ್ನಿಸಿದರು.

ಆವಿಷ್ಕಾರ ಪ್ರಗತಿಪರ ಸಾಂಸ್ಕÊತಿಕ ವೇದಿಕೆಯ ಸಂಚಾಲಕಿ ಅಶ್ವಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹೇಶ್ವರಿ ಹಿರೇಮಠ, ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ್, ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಡಾ. ಸೀಮಾ ದೇಶಪಾಂಡೆ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಈಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net