ಕೆ.ಆರ್.ಸಾಗರ: ಹೊಸ ಉಂಡವಾಡಿ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಕೊಲೆಯಾದ ವ್ಯಕ್ತಿ ಕೂರ್ಗಳ್ಳಿ ಗ್ರಾಮದ ಬೆಟ್ಟಾಚಾರಿ ಎಂಬುವರ ಮಗ ಮಹೇಶ(32) ಎಂದು ಗುರುತಿಸಲಾಗಿದೆ. ಉಂಡವಾಡಿ ಗ್ರಾಮದ ಇಲವಾಲ ರಸ್ತೆ ಬದಿಯ ಹೊಲದಲ್ಲಿ ಈತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಆದರೆ ಈತನ ಮಾಹಿತಿ ತಿಳಿದಿರಲಿಲ್ಲ.
ಮಹೇಶ ಕಾರ್ಪೆಂಟರ್ ಆಗಿದ್ದು, ಬುಧವಾರ 2 ರಿಂದ 3 ಜನ ಯುವಕರು ಬಂದು ಈತನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದರು ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.