ಕೊಲೆಗೈದು ರುಂಡ ಒಯ್ದರು

WhatsApp Image 2024-11-04 at 7.38.01 PM
Published on

ಕಲಬುರಗಿ: ನಗರದ ಹೊರವಲಯದ ಸ್ಟೇಷನ್ ಬಬಲಾದ ಗ್ರಾಮದ ವ್ಯಾಪ್ತಿಯ ಜಮೀನೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆಗೈದು, ರುಂಡ ಮತ್ತು ದೇಹ ಬೇರ್ಪಡಿಸಿದ್ದು, ರುಂಡವನ್ನು ಕೊಂಡ್ಯೊಯ್ದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸುಮಾರು ೩೦-೩೫ ವರ್ಷ ವಯಸ್ಸಿನ ಅಪರಿಚಿತ ಶವದ ದೇಹ ಪತ್ತೆಯಾಗಿದ್ದು, ರುಂಡ ಪತ್ತೆಯಾಗಿಲ್ಲ. ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದು, ಸಾಕ್ಷಿ ನಾಶ ಪಡಿಸುವ ಉz್ದೆÃಶದಿಂದ ರುಂಡವನ್ನು ತೆಗೆದುಕೊಂಡು ಹೋಗಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಪಿಐ ಸಂತೋಷ ತಟ್ಟೆಪಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net