

ಆಳಂದ: ತಾಲೂಕಿನ ಹಳ್ಳಿಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರಗೈದು, ಕೊಲೆ ಮಾಡಿದ ಕಿರಾತಕರಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿAದ ಬಸ್ ನಿಲ್ದಾಣ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ಇಡೀ ಮನುಕುಲವೇ ತಲೆತಗ್ಗಿಸುವ ಘಟನೆ ಇದಾಗಿದೆ. ಹೆಣ್ಣನ್ನು ಕೀಳಾಗಿ ತೋರಿಸುವ ಮತ್ತು ಅಶ್ಲೀಲ ವೀಡಿಯೋಗಳ ಮೇಲೆ ತೀವ್ರ ನಿಗಾವಹಿಸಿ, ಸೈಬರ್ ಅಪರಾಧ ವ್ಯಾಪ್ತಿಗೆ ಒಳಪಡಿಸುವುದು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕು. ಅತ್ಯಾಚಾರಗಳಿಗೆ ವಿಧಿಸುವ ಶಿಕ್ಷೆ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಗೋಡೆ ಬರಹ ಬರೆಸಬೇಕು. ಅತ್ಯಾಚಾರಕ್ಕೆ ಬಲಿಯಾದ ಕುಟುಂಬಕ್ಕೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಭಾಗದಲ್ಲಿ ಶೌಚಗೃಹಗಳಿಲ್ಲ, ಹೀಗಾಗಿ ಮಹಿಳೆಯರು ಶೌಚಕ್ಕೆ ಹೋದಾಗಲೇ ದುಷ್ಕೃತ್ಯಗಳು ನಡೆಯುತ್ತಿವೆ. ಕೂಡಲೇ ಎಲ್ಲ ಕಡೆ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು. ಪುಂಡಾಟಿಕೆ ಮಾಡುವವÀರ ವಿವರ ಪಡೆದು, ತೀವ್ರ ನಿಗಾವಹಿಸಬೇಕು ಎಂದು ಒತ್ತಾಯಿಸಿದರು. ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಪೂಜ್ಯ ಅಮರ ಜ್ಯೋತಿ ಭಂತೆಜೀ, ಪ್ರಮುಖರಾದ ಸುರೇಶ ಬಾಪು, ಸುಗಂಧಾ ಮಾವಿನಕರ್, ಪಾಂಡುರAಗ ಮಾವಿನಕರ್, ಪದ್ಮಿನಿ ಕಿರಣಗಿ, ಸುಧಾಮ ಧನ್ನಿ, ಪುಷ್ಪಾವತಿ ಚಟ್ಟಿ, ರಮೇಶ ಲೋಹಾರ, ಮೌಲಾ ಮುಲ್ಲಾ, ಪೂಜಾ ಲೋಹರಾ, ಬಾಬುರಾವ ಅರುಣೋದಯ, ಮಲ್ಲಿನಾಥ ಯಲಶಟ್ಟಿ, ಗೌರಮ್ಮ ಕಂಬಾರ, ರೂಪಾ ಇಕ್ಕಳಕಿ, ಇಂದುಮತಿ ದೇಗಾಂವ, ಮಲ್ಲಮ್ಮ ಹೆಬಳಿ, ಕಾವೇರಿ ಜಿಡಗಾ, ಶಿವಲೀಲಾ ಹೆಬಳಿ, ನೀಲಮ್ಮ ಇಕ್ಕಳಕಿ ಇತರರಿದ್ದರು.