ಮಧುಗಿರಿ: ತಾಲೂಕಿನ ಸಿದ್ಧಾಪುರ ಮಂಜುನಾಥ್ ಎಂಬುವವರ ಕೊಲೆ ಯತ್ನ ಆರೋಪದ ಹಿನ್ನೆಲೆಯಲ್ಲಿ ಬೆಂಕಿಪುರದ ಮಾರುತಿ ಹಾಗೂ ಆತನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಪೋಟೋಗ್ರಾಫರ್ ಮಂಜುನಾಥ ಮತ್ತು ಮಾರುತಿ ನಡುವೆ ಹಣಕಾಸು ವಿಷಯದಲ್ಲಿ ಉಂಟಾಗಿದ್ದ ವೈಮನಸ್ಸು ಧ್ವೇಷಕ್ಕೆ ತಿರುಗಿ ಕೊಲೆ ಯತ್ನದ ವರೆಗೂ ಬಂದಿತ್ತು. ಶಿರಾಗೇಟ್ನಲ್ಲಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಮಂಜುನಾಥನ ಜತೆಗೆ ಜಗಳ ತೆಗೆದು ಕೊಲೆಗೆ ಯತ್ನಿಸಿದ್ದರು ಎಂದು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಮಾರುತಿ ಮತ್ತು ಆತನ ಸಹಚರರು ಕಬ್ಬಿಣದ ರಾಡ್ನಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು ಆರೋಪಿಗಳಾಗಿರುವ 7 ಜನರ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.