ಕೊಲೆಗೆ ಯತ್ನ: ಇಬ್ಬರ ಬಂಧನ

Crime Logo
Published on

ಕೊಲೆಗೆ ಯತ್ನ: ಇಬ್ಬರ ಬಂಧನ

ಬೆಳಗಾವಿ : ಸಾರಾಯಿ ಮತ್ತಿನಲ್ಲಿ ಕಲ್ಲಿನಿಂದ ಹಲ್ಲೆ ಮಾಡಿ ವ್ಯಕ್ತಿಯೊರ್ವನನ್ನು ಕೊಲೆಗೆ ಯತ್ನ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಆರ್ ಪಿಡಿ ಕ್ರಾಸ್ ಬಳಿ ಗಣೇಶಪುರ ನಿವಾಸಿ ದಿಲೀಪ್ ರಾಮಸಿಂಗ್ ಠಾಕೂರ(41) ಹಲ್ಲೆಗೊಳಗಾದ ವ್ಯಕ್ತಿ.ಈತನ ಮೇಲೆ ತಿಲಕವಾಡಿ ನಿವಾಸಿಗಳಾದ ಮನೋಜ ರಮೇಶ ಜಾದವ(38) ,ರಾಹುಲ್ ಮೋಹನ ಬಾಟಿಯಾ(35) ಆ.1 ರಂದು ಬಂಧಿತ ಆರೋಪಿಗಳು ಹಲ್ಲೆ ಮಾಡಿದ್ದರು.

ಆರೋಪಿತರು ದಿಲೀಪ್ ಠಾಕೂರ ಮೇಲೆ ಹಲ್ಲೆ ನಡೆಸಿ,ಕೊಲೆಗೆ ಯತ್ನಿಸಿದ್ದಾರೆ ಎಂದು ದಿಲೀಪ್ ಪತ್ನಿ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net