ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆ ಮಾರಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿದ ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ೪೦ ಸಾವಿರ ರೂ. ದಂಡ ವಿಧಿಸಿ ೩ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಆದೇಶಿಸಿದ್ದಾರೆ.
೨೦೧೯ರ ಜ.೧೦ರಂದು ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣದ ಎದುರಿನ ಕಮಲ್ ಹೋಟೆಲï ಎದುರು ಮೇಳಕುಂದಾ (ಬಿ) ಗ್ರಾಮದ ಮಲ್ಲಿಕಾರ್ಜುನನ್ನು ಕೊಲೆ ಮಾಡಲಾಗಿತ್ತು. ನಗರದ ನಿವಾಸಿ ಸಂತೋಷ ಸ್ವಾಮಿ, ಅಕ್ಕಲಕೋಟ ತಾಲೂಕಿನ ಮೈಂದರಗಿಯ ನಾಗರಾಜ ಬಜಾರಮಠ ಕೊಲೆ ಮಾಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ಭಾಗಿಯಾದ ಮೂರನೇ ಆರೋಪಿ ಶರಣಬಸಪ್ಪಗೆ ಐದು ವರ್ಷ ಶಿಕ್ಷೆ ವಿಧಿಸಿದ್ದು, ಮೃತನ ಪತ್ನಿ ಹಾಗೂ ಪುತ್ರನಿಗೆ ೩೦ ಸಾವಿರ ರೂ. ಪರಿಹಾರ ನೀಡಬೇಕು. ಹೆಚ್ಚಿನ ಪರಿಹಾರಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಆದೇಶಿಸಿದೆ.
ಅಶೋಕ ನಗರ ಪೊಲೀಸ ಠಾಣೆ ವೃತ್ತ ನಿರೀಕ್ಷಕ ತನಿಖಾಧಿಕಾರಿ ರಮೇಶ ಕಾಂಬಳೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದಿಸಿದ್ದರು.
ಘಟನೆ ಹಿನ್ನೆಲೆ: ಮೊದಲ ಅಪರಾಧಿ ಸಂತೋಷ ಸ್ವಾಮಿಗೆ ಬಗ್ಗೆ ಕೊಲೆಗೀಡಾದ ಮಲ್ಲಿಕಾರ್ಜುನ ಹೀಯಾಳಿಸಿ ಮಾತನಾಡಿದ್ದ, ಮ್ಯಾನೇಜರ್ ಕೆಲಸದಿಂದ ತೆಗೆಸಿದ್ದಾರೆ ಎಂದು ದ್ವೇಷ ಇಟ್ಟುಕೊಂಡು, ೨೦೧೯ರ ಜನೆವರಿ ೧೦ರಂದು ಬೆಳಗ್ಗೆ ಅಪರಾಧಿಗಳು ಬೈಕ್ ಮೇಲೆ ಬಂದು ಹಳೇ ವೈಷ್ಯಮ್ಯದಿಂದ ಬಸ್ ನಿಲ್ದಾಣದ ಬಳಿ ಹಾಡಹಗಲೇ ಕೊಲೆ ಮಾಡಿದ್ದರು. ಕೊಲೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಂಚಲನ ಮೂಡಿಸಿತ್ತು.