ಕೊಲೆಗಾರನಿಗೆ ಜೀವಾವಧಿ ಶಿಕ್ಷೆ, ೪ಲಕ್ಷ ದಂಡ

court
Published on

ಕಲಬುರಗಿ: ಕೊಲೆ ಮಾಡಿದ ಅಪರಾಧಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಎರಡು ಲಕ್ಷ ರೂ. ದಂಡ ವಿಧಿಸಿ ೩ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ತೀರ್ಪು ನೀಡಿದ್ದಾರೆ. ಶಿವಶಾಂತ ಮೂಲಗೆ, ಪ್ರಶಾಂತ ಮೂಲಗೆ ಶಿಕ್ಷೆಗೆ ಒಳಪಟ್ಟ ಅಪರಾಧಿಗಳು.
೨೦೨೨ರಲ್ಲಿ ನಡೆದ ನಗರದ ಬಸಂತ ನಗರದ ಲಕ್ಷಿö್ಮÃಪುತ್ರ ಜಮಜೇನವರನನ್ನು ಹಣಕಾಸಿನ ವಿಷಯಕ್ಕೆ ದಸರಾ ಹಬ್ಬದ ದಿನ ಬಿದ್ದಾಪುರ ಕಾಲನಿಯಲ್ಲಿ ಬನ್ನಿ ಕೊಡಲು ಹೋಗಿದ್ದಾಗ ಎಳೆನೀರು ವ್ಯಾಪಾರಿ ಶಿವಶಾಂತ ಮೂಲಗೆ, ಹೂವಿನ ವ್ಯಾಪಾರಿ ಲಕ್ಷö್ಮಣಗೌಡ ಮೂಲಗೆ ಹಣಕಾಸಿನ ವಿಚಾರಕ್ಕೆ ಸಂಬAಧಿಸಿದAತೆ ಮಚ್ಚಿನಿಂದ ಕೊಲೆ ಮಾಡಿದ್ದರು. ಈ ಕುರಿತು ಅಶೋಕ ನಗರ ತನಿಖಾಧಿಕಾರಿ ಪಂಡಿತ ಸಗರ ದೋಷಾರೋಪಣೆ ಸಲ್ಲಿಸಿದ್ದರು. ಪೇದೆಗಳಾದ ಧಾನಪ್ಪ, ಸುಧಾಕರ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಮೃತನ ಪತ್ನಿಗೆ ೩.೮೦ ಲಕ್ಷ ರೂ. ಪರಿಹಾರ ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net