

ಕಲಬುರಗಿ: ಚಿಂಚೋಳಿ ತಾಲೂಕಿನ ಹೊಡೆಬೀರನಳ್ಳಿಯಲ್ಲಿ ೨೦೧೪ ನ.೨೮ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಮುಖ ಅಪರಾಧಿ ಶಂಕರ್‌ಗೆ ೧೦ ವರ್ಷ, ದ್ವಿತೀಯ ಅಪರಾಧಿ ರೇವಣಸಿದ್ದಪ್ಪನಿಗೆ ೭.೬ ವರ್ಷ ಜೈಲು ಶಿಕ್ಷೆ ನೀಡಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಕರಣ್ ಗುಜ್ಜರ್ ತೀರ್ಪು ನೀಡಿದ್ದಾರೆ. ಹೊಲದಲ್ಲಿ ಪಾಲು ಸರಿಯಾಗಿ ನೀಡಿಲ್ಲ ಎಂದು ಹೊಡೆಬೀರನಳ್ಳಿಯ ಶಿವಣ್ಣನನ್ನು ಮನೆಯ ಎದುರೇ ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಅಲ್ಲದೆ ಶಿವಣ್ಣನ ಪತ್ನಿಯನ್ನು ಎಳೆದಾಡಿ ಮಾನಭಂಗಪಡಿಸಿದ್ದು, ಮಕ್ಕಳ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಕುರಿತು ಸುಲೇಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಅಂದಿನ ಸಿಪಿಐ ಶೀಲವಂತ ಹೊಸಮನಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಇಬ್ಬರು ಪ್ರಮುಖ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದು, ಮೃತನ ಪತ್ನಿಗೆ ೩೦ ಸಾವಿರ ಪರಿಹಾರ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಪ್ರಾಣೇಶ ಭರತನೂರ ವಾದಿಸಿದ್ದರು. ಎಚ್.ಸಿ. ಮನೋಹರ ರಡ್ಡಿ ಸಾಕ್ಷಿಗಳನ್ನು ಹಾಜರುಪಡಿಸಿದ್ದರು.