

ಹಾಸನ:ಜೆಸಿಬಿ ಬಾಡಿಗೆ ವಿಚಾರದಲ್ಲಿ ರೌಡಿಶೀಟರ್ ಸಮುದ್ರವಳ್ಳಿ ಸಂತೋಷ ಎಂಬಾತ ಚಿಕ್ಕಮಂಗಳೂರಿನ ವ್ಯಕ್ತಿಯನ್ನ ಅಪರಣ ಮಾಡಿ ಆತನಿಗೆ ಹಲ್ಲೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಆರೋಪಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್.ಪಿ. ತಿಳಿಸಿದರು
ಚಿಕ್ಕಮಗಳೂರು ಮೂಲದ ಜೆಸಿಬಿ ಕಂಟ್ರಾಕ್ಟರ್ ಸುನಿಲ್ ಕುಮಾರ್ ಯಾದವ್ ಎಂಬುವವರಿಗೆ ರೌಡಿಶೀಟರ್ ಸಮುದ್ರವಳ್ಳಿ ಸಂತೋಷ್ ಎಂಬಾತ ಜೆಸಿಬಿ ಬಾಡಿಗೆಗೆ ನೀಡಿದ್ದು, ಎರಡು ತಿಂಗಳ ನಂತರ 2 ಲಕ್ಷ ಹಣ ಹಣ ನೀಡುವಂತೆ ಒತ್ತಾಯ ಮಾಡಿದ್ದು,ಬಾಡಿಗೆ ಇಲ್ಲದ ಕಾರಣ ನೀಡಲು ನಿರಾಕರಿಸಿದಾಗ ಆತನನ್ನು ಅಲ್ಲಿಂದ ಅಪಹರಣ ಮಾಡಿಕೊಂಡು ಹಾಸನ ನಗರದಲ್ಲಿ ಲಾಡ್ಜ್‌ನಲ್ಲಿ ಕೂಡಿಹಾಕಿ ಹಲ್ಲೆ ಮಾಡುತ್ತಿದ್ದರು.
ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋಗಿ ನೋಡಿದಾಗ ಸುನಿಲ್ ಕುಮಾರ್ ಯಾದವ್ ಮೇಲೆ ಸತತ ಮೂರ್ನಾಲ್ಕು ಗಂಟೆ ಹಲ್ಲೆ ನಡೆದಿರುವುದು ಕಂಡು ಬಂದಿದೆ, ನಂತರ ಆತನ ಮೊಬೈಲ್ ನಿಂದ ಒತ್ತಾಯ ಪೂರ್ವಕವಾಗಿ ಸಂತೋಷ್ ಹಾಗೂ ಆತನ ಪತ್ನಿಯ ಹೆಸರಿಗೆ ಸುಮಾರು 90 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಮುದ್ರವಳ್ಳಿ ಸಂತೋಷ್‌ನನ್ನು ಬಂಧಿಸಿ ವಿಚಾರಣೆ ಒಳಪಡಿಸಲಾಗಿದೆ. ಈತ ಹಿಂದೆ ಕೊಲೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ ಈ ಘನೆಯಲ್ಲಿ ಇವನ ಜೊತೆ ಕೈ ಜೋಡಿಸಿದ್ದ ಇನ್ನಿಬ್ಬರು ಆರೋಪಿಗಳ ಹುಡುಕಾಟ ನಡೆಯುತ್ತಿದೆ ಎಂದರು