ಕೊಲೆ ಪ್ರಕರಣ, ಐವರ ಬಂಧನ

Arrest Kaidhi
Published on

ಬೆಳಗಾವಿ: ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಕುಮಾರ ರಾಮು ಖೋತ ಎಂಬಾತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಚಿ ಪೋಲಿಸರು ಭಾನುವಾರ ಐವರನ್ನು ಬಂಧಿಸಿದ್ದಾರೆ. ಚಿಂಚಲಿಯ ಬಾಳೇಶ ಶಶಿಕಾಂತ ಹಾರೊಗೇರಿ, ಸಚಿನ ಕುಮಾರ ಖೋತ, ಗೀತಾ ಕುಮಾರ ಖೋತ, ಬೆಳಕೂಡ ಗ್ರಾಮದ ಅಪ್ಪಾಸಾಬ ಜಿನ್ನಪ್ಪ ತಪಕಿರೆ, ಸಂತೋಷ ನೇಮಿನಾಥ ತಪಕಿರೆ ಬಂಧಿತರು.

ಮೇ 27ರಂದು ಕುಮಾರ ಖೋತ ಅವರನ್ನು ಜಮೀನಿನಲ್ಲಿಯೇ ಯಾರೋ ಕೊಲೆ ಮಾಡಿದ್ದಾರೆ ಎಂದು ಅವರ ಪತ್ನಿ ಗೀತಾ ಖೋತ, ಜೂ. 2ರಂದು ಕುಡಚಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ತನಿಖೆ ಕೈಗೊಂಡಿದ್ದ ಸಿಪಿಐ ಕೆ.ಎಸ್.ಹಟ್ಟಿ ಹಾಗೂ ಸಿಬ್ಬಂದಿ, ಕೊಲೆ ಮಾಡಿರುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರ ಅವರಿಗೆ ಮದ್ಯ ಕುಡಿಸಿ ಬಳಿಕ ಕಲ್ಲಿನಿಂದ ತಲೆಗೆ, ಎದೆಗೆ ಹೊಡೆದು ಕೊಲೆ ಮಾಡಿದ್ದಾರೆ. ಸಾಕ್ಷೃ ನಾಶ ಮಾಡಲು ಕೃಷ್ಣಾ ನದಿಯಲ್ಲಿ ಅವರ ಮೃತದೇಹ ಎಸೆದಿರುವುದಾಗಿ ತನಿಖೆ ವೇಳೆ ಬಂಧಿತರು ಬಾಯಿ ಬಿಟ್ಟಿದ್ದಾರೆ.

ತನಿಖೆಯಲ್ಲಿ ಪಿಎಸ್‌ಐ ಶಿವರಾಜ ಧರಿಗೋಣ, ಎಎಸ್‌ಐ ಕೆ.ಆರ್.ಸಾಳುಂಕೆ, ಪಿ.ಎಲ್. ಖವಟಕೊಪ್ಪ, ಎಲ್.ಡಿ. ಸಡ್ಡಿ, ಪಿ.ಎಸ್. ಬಬಲೇಶ್ವರ, ವಿ.ಪಿ. ದೊಡಮನಿ, ಸಿದ್ದು ಪಾಟೀಲ, ಆರೀಫ್ ಮುದ್ನಾಳ, ಪಿ.ಡಿ. ಚವ್ಹಾಣ, ಎಂ.ಎ. ಪಾಟೀಲ, ಎಚ್.ಎಸ್. ಗುಡ್ಡದ, ವಿಜಯಲಕ್ಷ್ಮೀ ಢವಳೇಶ್ವರ, ಕವಿತಾ ಕಾಡಗೌಡರ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net