ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ

24Savadatti
ಯುವಕನ ಕೊಲೆ ಖಂಡಿಸಿ ಸವದತ್ತಿಯ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಫಕ್ರುಸಾಬ್ ನದಾಫ್, ಕೆ.ಕೆ.ಪುಣೇದ ಮತ್ತಿತರರು ಇದ್ದರು.
Published on

ಸವದತ್ತಿ: ನರಗುಂದ ಪಟ್ಟಣದಲ್ಲಿ ಕೆಲ ದುಷ್ಕರ್ಮಿಗಳು ಮುಸ್ಲಿಂ ಸಮಾಜದ ಸಮೀರ ಶಹಾಪುರ ಎಂಬಾತನನ್ನು ಅಮಾನವೀಯವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ, ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ತಹಸೀಲ್ದಾರ್ ಮೂಲಕ ಸಿಎಂಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಫಕ್ರುಸಾಬ್ ನದಾಫ್ ಮಾತನಾಡಿ, ಸಮೀರ್‌ನನ್ನು ಕೊಲೆ ಮಾಡಿದ್ದಾರೆ. ಆತನ ಸ್ನೇಹಿತನನ್ನು ಗಾಯಗೊಳಿಸಿದ್ದಾರೆ. ಇಂತಹ ಗಲಭೆಗಳು ಪದೆ ಪದೇ ನಡೆಯುತ್ತಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗಲಭೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಲ್ಲೆ ಮಾಡಿದವರನ್ನು ಶೀಘ್ರ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸಂಘಟನೆ ಅಧ್ಯಕ್ಷ ಕೆ.ಕೆ. ಪುಣೇದ, ಎಸ್.ಎಂ.ಸಂಗ್ರೇಶಕೊಪ್ಪ, ಕಲೀಮ ಚೂರಿಖಾನ್, ಅಮೀರ್ ಗೋರೆನಾಯ್ಕ, ಅಕೀಫ್
ಯಡ್ರಾವಿ, ಗಂಗಯ್ಯ ಅಮೋಘಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net