

ಕಲಬುರಗಿ: ಹಳೇ ದ್ವೇಷಕ್ಕೆ ನಗರದ ಇಸ್ಲಾಮಾಬಾದ್ ಕಾಲನಿಯಲ್ಲಿ ಸೆ.6ರಂದು ಬಿಲಾಲ್ ಅಹ್ಮದ್ನನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಸ್ಲಾಮಾಬಾದ್ ಕಾಲನಿಯ ಸಮೀರ್ ಅಲಿಯಾಸ್ ಟಮಾಟಾ ಸಮೀರ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಲಾಲ್ ಅಹ್ಮದ್ನನ್ನು ಹಣ, ರಿಯಲ್ ಎಸ್ಟೇಟ್ ಜಗಳದ ಕಾರಣಕ್ಕೆ ಸೆ.6ರಂದು ಸಂಜೆ 7ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಮಾರ್ಗದರ್ಶನದಲ್ಲಿ ಪ್ರಭಾರ ಪಿಐ ಸುಶೀಲಕುಮಾರ ನೇತೃತ್ವದಲ್ಲಿ ಪಿಎಸ್ಐ ಬಸವರಾಜ, ಎಎಸ್ಐ ನಾಗರಾಜ, ಸಿಬ್ಬಂದಿ ಮಂಜುನಾಥ, ಫಿರೋಜ, ಶಶಿಕಾಂತ ಅವರ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.