ಕೊಲೆ ಆರೋಪಿ ಬಂಧನ

arrest
Published on

ಚಿತ್ರದುರ್ಗ: ನಗರದ ಯಂಗಮ್ಮನ ಕಟ್ಟೆ ರುದ್ರಭೂಮಿಯಲ್ಲಿ ಶುಕ್ರವಾರ ಹಿರಿಯೂರಿನ ರೋಜಾ (31) ಎಂಬುವರನ್ನು ಕೊಲೆಗೈದು
ಸಮಾಧಿಯೊಂದರ ಮೇಲೆ ಮಲಗಿಸಲಾಗಿತ್ತು. ಪ್ರಕರಣ ಬೇಧಿಸಿರುವ ಪೋಲಿಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ ಹಿನ್ನೆಲೆ: ಧಾರವಾಡದ ಪ್ರದೀಪ್ ಬಂಧಿತ ಆರೋಪಿ. ಈತ ಮನೆ ಬಿಟ್ಟು ಚಿತ್ರದುರ್ಗಕ್ಕೆ ಬಂದು ಎರಡು ವರ್ಷವಾಗಿದೆ. ಇಲ್ಲಿನ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ. ವರ್ಷದ ಹಿಂದೆ ಭಿಕ್ಷೆ ಬೇಡುತ್ತಿದ್ದ ರೋಜಾಳ ಪರಿಚಯವಾಗಿದೆ. ಆಗಾಗ್ಗೆ ರಾತ್ರಿ ವೇಳೆ ಯಂಗಮ್ಮನ ಕಟ್ಟೆ ರುದ್ರಭೂಮಿಗೆ ಬಂದು, ಇಬ್ಬರೂ ಮದ್ಯ ಸೇವಿಸಿ, ಊಟ ಮಾಡಿ ಹಿಂದಿರುಗುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ಗುರುವಾರ ಜಗಳ ಕೂಡ ನಡೆದಿತ್ತು. ಮರುದಿನ ಮಹಿಳೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದರು. ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net