ಕೊಲೆ ಆರೋಪಿ ಬಂಧನ

Arrest Kaidhi
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ಬಳಿ ಇತ್ತೀಚೆಗೆ ನಡೆದ ಕೊಲೆ ಸಂಬಂಧ ಸೋಮವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ ಗ್ರಾಮದ ಇಸ್ಮಾಯಿಲ್​ ಕುತುಬುದ್ದೀನ್​ ಮುಲ್ಲಾ (24) ಬಂಧಿತ ಆರೋಪಿ.

ಆ.6 ರಂದು ಪಾಂಡುರಂಗ ಸಾಬು ಬಳಗಲಿ (47) ಎಂಬುವರನ್ನು ಅಡಹಟ್ಟಿಯಿಂದ ಬ್ಯಾಡರಟ್ಟಿಗೆ ಬೈಕ್​ ಮೇಲೆ ಬರುವಾಗ ಹತ್ಯೆ ಮಾಡಲಾಗಿತ್ತು. ಪಾಂಡುರಂಗ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದರಿಂದ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿವೈಎಸ್​ಪಿ ಶ್ರೀಪಾದ ಜಲ್ದೆ ಮಾರ್ಗದರ್ಶನದಲ್ಲಿ ಸಿಪಿಐ ಶಂಕರಗೌಡ ಬಸನಗೌಡರ ಹಾಗೂ ಪಿಎಸ್​ಐ ಪಿಎಸ್​ಐ ಸಂಬಾಜಿ ಪವಾರ ನೇತೃತ್ವದ ತಂಡದಲ್ಲಿ ಅಣ್ಣಾಸಾಬ ಈರಕರ, ಜಮೀರ್​ ಪಟೇಗಾರ, ಎಂ.ಎ.ಪಾಟೀಲ ಪಿ.ಬಿ. ನಾಯಿಕ, ಸಂಜು ಕಾಂಬಳೆ, ಎ.ಸಿ.ಮುಜಾವರ್​, ಜೆ.ಪಿ.ರಾಠೋಡ ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net