ಕೊಲೆ ಅಪರಾಧಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿ

SWAMY
ಮಸ್ಕಿಯಲ್ಲಿ ಹಿಂದು ಸಮಾಜ ನೇತೃತ್ವದಲ್ಲಿ ಶುಕ್ರವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪ್ರಮುಖರಾದ ಡಾ.ಬಿ.ಎಚ್.ದಿವಟರ್, ಮಹದೇವಪ್ಪಗೌಡ ಪೊಲೀಸ್ ಪಾಟೀಲ, ಸಿದ್ದಣ್ಣ ಹೂವಿನಬಾವಿ, ಪ್ರಕಾಶ ಧಾರಿವಾಲ, ಮಲ್ಲಪ್ಪ ಕುಡತನಿ ಇದ್ದರು.
Published on

ಮಸ್ಕಿ: ಟಿ.ನರಸೀಪುರದಲ್ಲಿ ಹಿಂದು ಸಂಘಟನೆ ಕಾರ್ಯಕರ್ತ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಜೈನಮುನಿ ಹತ್ಯೆ ಖಂಡಿಸಿ ಹಿಂದು ಸಮಾಜದಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಶಾಂತಿ ಹೆಚ್ಚಿದೆ. ಬೆಳಗಾವಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹಾಗೂ ಮೈಸೂರಿನ ಹಿಂದು ಕಾರ್ಯಕರ್ತ ವೇಣುಗೋಪಾಲರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೀಗಾಗಿ ಜನರು ಭಯದಲ್ಲಿ ಜೀವನ ನಡೆಸುವ ಸ್ಥಿತಿ ಬಂದಿದೆ. ಕೂಡಲೇ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷಗೆ ಒಳಪಡಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆಗ್ರಹಿಸಿದರು.

ಹಿಂದುಗಳ ಮೇಲೆ ಹಲ್ಲೆ

ಹಿಂದುಗಳ ಮೇಲೆ ಹಲ್ಲೆ, ಕೊಲೆ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಕೂಡಲೇ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಲಯನ್ಸ್ ಕ್ಲಬ್ ನಿರ್ದೇಶಕ ಡಾ. ಬಿ.ಎಚ್.ದಿವಟರ್ ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಅರಮನೆ ಸುಧಾಗೆ ಮನವಿ ಸಲ್ಲಿಸಿದರು.

ಇದನ್ನೂ ಮುನ್ನ ಮೌನ ಪ್ರತಿಭಟನಾ ಮೆರವಣಿಗೆಗೆ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಹೇಶ ಕ್ಯಾತ್ನಟ್ಟಿ, ಜಿ.ಪಂ. ಮಾಜಿ ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಪ್ರಮುಖರಾದ ಸಿದ್ದಣ್ಣ ಹೂವಿನಬಾವಿ, ಪ್ರಕಾಶ ಧಾರಿವಾಲ, ಮಲ್ಲಪ್ಪ ಕುಡತನಿ, ಸಿದ್ದಲಿಂಗಯ್ಯ ಗಚ್ಚಿನಮಠ, ಬಸಪ್ಪ ಬ್ಯಾಳಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಸಿದ್ದು ಗುರೂಜಿ, ಅಮರೇಶ ಬ್ಯಾಳಿ, ಲಕ್ಷ್ಮೀನಾರಾಯಣ ಶೆಟ್ಟಿ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಪಾರ್ಶ್ವನಾಥ ಕೊಲ್ಹಾರ, ಜೀನಚಂದ್ರ, ಭರತ ಕೊಲ್ಹಾರ, ವಸಂತ, ಬಸವಲಿಂಗ ಶಟ್ಟಿ, ಡಾ.ಮಲ್ಲಿಕಾರ್ಜುನ ಇತ್ಲಿ, ಶಿವರಾಜ ಇತ್ಲಿ, ಬಸವರಾಜ ಕಡಿ, ಸುಕುಮುನಿಯಪ್ಪ ನಾಯಕ, ಮೌನೇಶ ನಾಯಕ, ರಾಕೇಶ ಪಾಟೀಲ, ಆಶಾ ಕ್ಯಾತ್ನಟ್ಟಿ, ನಿರ್ಮಲ ಗಚ್ಚಿನಮಠ, ಅಂಜನಾ ಕೊಲ್ಹಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net