ಕೊಲೂರು ಮಲ್ಲಪ್ಪ ಸ್ಮಾರಕಕ್ಕಾಗಿ ಭೂಮಿ ನೀಡಿ

ydg06
Published on

ಯಾದಗಿರಿ: ಕಲ್ಯಾಣ ಕರ್ನಾಟಕದ ಗಾಂಧಿ ಎಂದೇ ಕರೆಯಲ್ಪಡುವ ಸ್ವಾತಂತ್ರö್ಯ ಹೋರಾಟಗಾರ ದಿ.ಕೊಲೂರು ಮಲ್ಲಪ್ಪ ಸ್ಮಾರಕ ಹಾಗೂ ಸಭಾಭವನ ನಿರ್ಮಾಣಕ್ಕೆ ಜಿ¯್ಲÁ ಕೇಂದ್ರದ ಪ್ರತಿಷ್ಠಿತ ಸ್ಥಳದಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಕುರುಬ ಸಂಘದ ಜಿ¯್ಲÁಧ್ಯP್ಷÀ ಮಲ್ಲಣ್ಣ ಐಕೂರ ನೇತೃತ್ವದಲ್ಲಿ ಗುರುವಾರ ಜಿ¯್ಲÁಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಹಿಂದುಳಿದ ಯಾದಗಿರಿ ಜಿಲ್ಲೆಯ ಮಲ್ಲಪ್ಪ ಅವರು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಅವರ ಒಡನಾಡಿಯಾಗಿ ಕೆಲಸ ಮಾಡಿದ್ದಾರೆ. ರಾಜಕೀಯ ಮತ್ತು ಸಾಮಾಜಿಕ ಸೇವೆಗಳ ಮೂಲಕ ರಾಜ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಯಾದಗಿರಿ, ರಾಯಚೂರಿನಲ್ಲಿ ಜನತಾ ಟ್ರಸ್ಟ್ ಸ್ಥಾಪಿಸುವ ಮೂಲಕ ಕುಷ್ಠ ರೋಗಿಗಳ ಆರೈಕೆ ಮಾಡಿ, ಅವರಿಗಾಗಿ ಸರ್ಕಾರದಿಂದ ಮನೆ ಹಾಗೂ ಇನ್ನಿತರ ಸೌಲಭ್ಯ ಒದಗಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಸ್ಮರಿಸಿದರು.

ಇಂತಹ ಮೇರು ವ್ಯಕ್ತಿತ್ವದ ನಾಯಕನ ಸ್ಮಾರಕ ನಿರ್ಮಾಣಕ್ಕೆ ೨೦೧೮ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕೋಟಿ ಹಣ ಬಿಡುಗಡೆ ಮಾಡಿದ್ದರು. ಅದು ಹಾಗೆಯೇ ಉಳಿದಿದೆ. ಸ್ಮಾರಕ ನಿರ್ಮಾಣಕ್ಕೆ ಸೂಕ್ತ ಸ್ಥಳದಲ್ಲಿ ಜಮೀನು ಮಂಜೂರು ಮಾಡುವಂತೆ ಸಾಕಷ್ಟು ಬಾರಿ ಜಿ¯್ಲÁಡಳಿತ ಮತ್ತು ನಗರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರರಿಗೂ ಮನವಿ ಮಾಡಿದ್ದು, ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಈ ಕರ‍್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ತಾವು ಕೂಡಲೇ ನಗರದ ಪ್ರತಿಷ್ಠಿತ ಸ್ಥಳದಲ್ಲಿ ಎರಡು ಎಕರೆ ಭೂಮಿ ಮಂಜೂರು ಮಾಡಿ ಈ ಕೆಲಸಕ್ಕೆ ಚಾಲನೆ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದರು.

ಕೊಲೂರು ಮಲ್ಲಪ್ಪ ಅಭಿಮಾನಿ ಬಳಗದ ಮುಖಂಡರಾದ ಸಾಬಣ್ಣ ಕೆಂಗೇರಿ, ಬಸವರಾಜ ಕಾವಲಿ ಹೊರಟೂರ, ಹಣಮಂತರಾಯಗೌಡ ಮಾಲಿ ಪಾಟೀಲ್ ತೇಕರಾಳ, ಶರತ್ ಅಲಿಪುರ, ರಾಜು ಎಸ್.ನಾಯ್ಕೋಡಿ, ಭೀಮಣ್ಣ ಪೂಜಾರಿ, ರವಿಗೌಡ ಹೊರಟೂರ್, ಹೊನ್ನಪ್ಪ ಯಡ್ಡಳ್ಳಿ, ಭಾಗಣ್ಣ ತಡಿಬಿಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net