

ಹೊಳೆನರಸೀಪುರ: ಒಂದನೇ ಮತ್ತು ಎರಡನೇ ಅಲೆಯನ್ನು ಸಮಪರ್ಕವಾಗಿ ಎದುರಿಸಿ ಜಿಲ್ಲೆಗೆ ಉತ್ತಮ ಸ್ಥಾನ ಪಡೆದಿದ್ದ ತಾಲೂಕು ಸಾರ್ವಜನಿಕ ಆಸ್ಪತ್ರೆ, ಒಮಿಕ್ರಾನ್ ರೂಪಾಂತರಿ ತಳಿ ಬಿಎಫ್7 ವೈರಸ್ ಅನ್ನು ಎದುರಿಸುವ ಸಲುವಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 2 ಆಕ್ಸಿಜನ್ ಪ್ಲಾಂಟ್, 100 ಆಕ್ಸಿಜನ್ ಜಂಬೋ ಸಿಲಿಂಡರ್ಸ್, 22 ಐಸಿಯು ಹಾಸಿಗೆಗಳು, 8 ವೆಂಟಿಲೆರ್ಸ್, ಒಟ್ಟು 25ರಲ್ಲಿ 23 ನೆಬ್ಲೆಸರ್ ಬಳಕೆ, 156 ಐಸೋಲೇಷನ್ ಬೆಡ್, 64 ಬೆಂಬಲಿತ ಪ್ರತ್ಯೇಕ ಹಾಸಿಗೆಗಳು, 14 ಆಕ್ಸಿಮೀಟರ್, 20 ಆಕ್ಸಿಜನ್ ಸಾಂಧ್ರಕಗಳು, 2 ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್‌ಗಳು, ಮೆಡಿಕಲ್ ಹ್ಯಾರಿಸ್ ಪೈಪ್‌ಲೈನ್ ಸಿಸ್ಟಂ ಅಳವಡಿಕೆ ಮಾಡಲಾಗಿದೆ.
5 ಡಯಾಲಿಸಸ್ ಯಂತ್ರಗಳು, 1 ಜರ್ಮನ್ ದೇಶದ ಆಧುನಿಕ ಸಿಟಿ ಸ್ಕಾೃನಿಂಗ್ ಯಂತ್ರ, 1 ಕ್ಷ-ಕಿರಣ ಯಂತ್ರ, ಇಸಿಜಿ ಯಂತ್ರ, ಪಿಪಿಇ ಕಿಟ್‌ಗಳು , 40 ಸಾವಿರ ಎನ್-65ಮಾಸ್ಕ್, ಆರ್‌ಟಿಪಿಸಿಆರ್ ಕಿಟ್‌ಗಳು, 50 ರ‌್ಯಾಟ್ ಕಿಟ್‌ಗಳು, ಪ್ರತಿದಿನ 150 ರೋಗಿಗಳ ತಪಾಸಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೋವಿಡ್ ಟೆಸ್ಟಿಂಗ್ ಲ್ಯಾಬ್, ಬಿಎಲ್‌ಎಸ್ ಅಂಬುಲೆನ್ಸ್ 1, ಎಎಲ್‌ಎಸ್ ಅಂಬುಲೆನ್ಸ್ 2, ತುರ್ತು ಸೇವಾ ಘಟಕದ ಅಂಬುಲೆನ್ಸ್ 1, 27 ವೈದ್ಯರು , 61 ನರ್ಸ್‌ಗಳು, ಒಬ್ಬರು ಆಯುಷ್ಮಾನ್ ವೈದ್ಯರು, ವೆಂಟಿಲೇಟರ್‌ಗಳ ತರಬೇತಿ ಹೊಂದಿದ ಸಿಬ್ಬಂದಿ, ಅಂಗನವಾಡಿ ಸಹಾಯಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.
ತಾಲೂಕು ಸಾರ್ವಜನಿಕ ಆಸ್ಪತ್ರೆ ಶ್ವಾಸಕೋಶ ತಜ್ಞ ಡಾ.ನಟರಾಜ್ ಮಾತನಾಡಿ ಒಮಿಕ್ರಾನ್ ರೂಪಾಂತರಿ ಬಿಎಫ್7 ಸೋಂಕನ್ನು ಎದುರಿಸಲು ಸಾರ್ವಜನಿಕ ಆಸ್ಪತ್ರೆಯಲ್ಲಿ ತರ್ತು ಚಿಕಿತ್ಸೆಗೆ ಅವಶ್ಯಕವಾದ ಎಲ್ಲ ಔಷಧಗಳು ಮತ್ತು ಕರೊನಾ ವಿರುದ್ಧದ ಕಿಚಿತ್ಸೆಗೆ ಅಗತ್ಯವಾದ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.