ಕೊರಿಯರ್ ಕೇಂದ್ರದಲ್ಲಿ ಮಿಕ್ಸಿ ಬ್ಲಾಸ್ಟ್: ಮಾಲೀಕನಿಗೆ ಗಾಯ

Published on

ಹಾಸನ: ನಗರದ ಕುವೆಂಪುನಗರ ಬಡಾವಣೆಯಲ್ಲಿರುವ ಡಿಟಿಡಿಸಿ ಕೊರಿಯರ್ ಕೇಂದ್ರದಲ್ಲಿ ಸೋಮವಾರ ಸಂಜೆ ಮಿಕ್ಸಿ ಸಿಡಿದು ಕೊರಿಯರ್ ಕೇಂದ್ರ ಮಾಲೀಕ ಶಶಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ವ್ಯಕ್ತಿಯೊಬ್ಬರು ತಮಗೆ ಡಿಟಿಡಿಸಿ ಕೊರಿಯರ್ ಮೂಲಕ ಪಾರ್ಸೆಲ್ ಬಂದಿದ್ದ ಮಿಕ್ಸಿಯನ್ನು ಸ್ವೀಕರಿಸದೆ ಹಿಂದಿರುಗಿಸಿದ್ದರು. ಅಂಗಡಿ ಮಾಲೀಕ ಶಶಿ ಸದರಿ ಮಿಕ್ಸಿಯನ್ನು ಪರೀಕ್ಷಿಸಿದಲು ವಿದ್ಯುತ್ ಪ್ಲಗ್‌ಗೆ ಸಂಪರ್ಕ ಕಲ್ಪಿಸಿ ಆನ್ ಮಾಡಿದಾಗ ಮಿಕ್ಸಿ ಜಾರ್ ಸಿಡಿದು ಶಶಿ ಅವರ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳು ಶಶಿಯನ್ನು ನಗರದ ಎಸ್‌ಎಸ್‌ಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ದೋಷದಿಂದ ಮಿಕ್ಸಿ ಜಾರ್ ಸಿಡಿದಿರುವ ಸಾಧ್ಯತೆ ಇದೆ. ಸದ್ಯಕ್ಕೆ ಯಾವುದೇ ರೀತಿಯ ಅನುಮಾನಾಸ್ಪದ ಸುಳಿವುಗಳು ಕಂಡು ಬರುತ್ತಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net