ಕೊರಬಾ ಸಾವಿಗೆ ಪೊಲೀಸರೇ ಕಾರಣ

PH 02
Published on

ಚಿತ್ತಾಪುರ: ಪೊಲೀಸರ ಕಿರುಕುಳದಿಂದಲೇ ಕಲಗುರ್ತಿ ಗ್ರಾಮದ ದೇವಾನಂದ ಕೊರಬಾ ಮೃತಪಟ್ಟಿದ್ದು, ಇಲ್ಲಿವರೆಗೂ ಸಂಬAಧಿತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದಿಂದ ತಹಸಿಲ್ ಕಚೇರಿ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕಳೆದೊಂದು ತಿಂಗಳ ಹಿಂದೆ ಯಾವುದೇ ಆರೋಪವಿಲ್ಲದೆ ಪೊಲೀಸರು ಕೊರಬಾ ಅವರನ್ನು ಬಂಧಿಸಿ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಾಡಬೂಳ ಠಾಣೆಯ ಪೊಲೀಸರು ಹಾಗೂ ಕಲಗುರ್ತಿ ಗ್ರಾಮದ ಕಾಂಗ್ರೆಸ್ ಮುಖಂಡರೇ ಸಾವಿಗೆ ಕಾರಣವಾಗಿದ್ದು, ಮಾಡಬೂಳ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸರ ಮೇಲೆ ಪ್ರಭಾವ ಬೀರಿ, ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಕೂಡಲೇ ದೇವಾನಂದ ಕೊರಬಾ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು. ಯಾವುದೇ ಆರೋಪವಿಲ್ಲದೆ ಅರೆಸ್ಟ್ ಮಾಡಿರುವ ಮುಖಂಡ ಮಣಿಕಂಠ ರಾಠೋಡ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಲಾಡ್ಜಿಂಗ್ ಕ್ರಾಸ್‌ನಿಂದ ತಹಸಿಲ್ ಕಚೇರಿವರೆಗೂ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಸಿಲ್ ಕಚೇರಿ ಆವರಣದಲ್ಲಿ ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಶಿರಸ್ತೇದಾರ ಅಶ್ವತ್ಥ ನಾರಾಯಣ ಅವರಿಗೆ ಸಲ್ಲಿಸಲಾಯಿತು.

ಬಿಜೆಪಿ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್, ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ್, ಕಾರ್ಯದರ್ಶಿಗಳಾದ ನಾಗರಾಜ ಹೂಗಾರ್, ರಾಮದಾಸ ಚವ್ಹಾಣ್, ಪ್ರಮುಖರಾದ ಬಸವರಾಜ ಶಿವಗೋಳ, ಸೋಮಶೇಖರ ಪಾಟೀಲ್ ಬೆಳಗುಂಪಾ, ವಿಠ್ಠಲ್ ನಾಯಕ, ಶಂಕರ ಚವ್ಹಾಣ್, ವಿಜಯಕುಮಾರ ಗುಂಡುಗುರ್ತಿ, ಬಾಬುಮಿಯಾ ಕಲಗುರ್ತಿ, ಮಲ್ಲಿಕಾರ್ಜುನ ಪೂಜಾರಿ, ನಾಗರಾಜ ಭಂಕಲಗಿ, ಚಂದ್ರು ಕಾಳಗಿ, ವಿನೋದ್ ಅನವರಕರ್, ನಿಂಗಾರೆಡ್ಡಿ ಭೀಮನಳ್ಳಿ, ಅಶೋಕ ನಿಪ್ಪಾಣಿ, ಸಿದ್ರಾಮಯ್ಯ ಗೊಂಬಿಮಠ, ಆನಂದಗೌಡ ನರಿಬೋಳ, ಶಂಭು ಭಂಗಿ, ಬಾಲಾಜಿ ಬುರಬುರೆ, ಮಹೇಶ ಬಾಳಿ, ಮಹಿಪಾಲ ಮೂಲಿಮನಿ ಇತರರಿದ್ದರು. ಸಿಪಿಐ ಪ್ರಕಾಶ ಯಾತನೂರ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net