

ಚಿಂಚೋಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಯೋಜನೆಗಳು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ಶಾಲಾ ಸುಧಾರಣಾ ಸಮಿತಿ ಶ್ರಮಿಸಬೇಕು ಎಂದು ಕೇರಳ್ಳಿ ಗ್ರಾ.ಪಂ ಅಧ್ಯಕ್ಷ ರವಿಕುಮಾರ ಎಸ್.ಸಾಲಿ ಕಿವಿ ಮಾತು ಹೇಳಿದರು.
ಕೊರಡಂಪಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು ಮಕ್ಕಳಿಗೆ ಉಚಿತವಾಗಿ ಶೂ ಹಾಗೂ ಸಾಕ್ಸ್ ವಿತರಿಸಿ ಮಾತನಾಡಿ, ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಳಪೆ ಶೂ ಪೂರೈಸಬಾರದು. ಸರಕಾರವು ಸಂಪೂರ್ಣವಾಗಿ ಶಾಲಾ ಮುಖ್ಯಗುರುಗಳಿಗೆ ಅಧಿಕಾರ ನೀಡಿದ್ದಾರೆ. ಆಯ್ಎಸ್ಆಯ್ ಮುಂದ್ರಣ ಹೊಂದಿರುವ ಗುಣಮಟ್ಟದ ಶೂ ಪೂರೈಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಪತಿ ರಾವ್, ಎಸ್ ಡಿ ಎಂ ಸಿ ಅಧ್ಯಕ್ಷ ಬಾಬೂರಾವ್ ವಿ ತಿಪ್ಪಾ, ಮುಖ್ಯಗುರುಶ್ರೀಶೈಲ ಎಂ ನಾಗಾವಿ ಶಿಕ್ಷಣ ಪ್ರೇಮಿಗಳಾದ ಸಂತೋಷ ಬೈನ್, ಸುನೀತಾ, ರುಕ್ಮಿಣಿ, ರೇವಣಸಿದ್ದಪ್ಪ ಪೂಜಾರಿ, ರೇಣುಕಾ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.