ಕೊರಚ, ಕೊರಮ ಎಂದೇ ನಮೂದಿಸಿ

6 ckm 5 girish
ಕೊರಮ ಕೊರಚ ಸಮುದಾಯದ ಮುಖಂಡ ಕೆ.ಜಿ.ಗಿರೀಶ್
Published on

ಚಿಕ್ಕಮಗಳೂರು: ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ನೀಡುವ ಸಂಬAಧ ಸರ್ಕಾರದಿಂದ ಸಮೀಕ್ಷೆ ನಡೆಯುತ್ತಿದ್ದು, ತಮ್ಮ ಮನೆಬಾಗಿಲಿಗೆ ಸಿಬ್ಬಂದಿ ಬಂದಾಗ ನಮ್ಮ ಸಮುದಾಯದ ಜನ ಕೊರಮ, ಕೊರಚ ಎಂದೇ ಜಾತಿ ಕಲಂನಲ್ಲಿ ಬರೆಯಿಸಬೇಕು ಎಂದು ಕೊರಮ ಕೊರಚ ಸಮುದಾಯದ ಮುಖಂಡ ಕೆ.ಜಿ.ಗಿರೀಶ್ ಮನವಿ ಮಾಡಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ಜನಕ್ಕೆ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಯುತವಾದ ಮೀಸಲು ದೊರೆಯುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮಾಜ ನಮ್ಮದಾಗಿದ್ದು, ಸಮೀಕ್ಷೆಯಿಂದ ನೈಜ ಜನಸಂಖ್ಯೆಯ ಪ್ರಮಾಣ ಸರ್ಕಾರಕ್ಕೆ ಗೊತ್ತಾಗಲಿದೆ ಎಂದರು.

ಆಗ ಸಮುದಾಯಕ್ಕೆ ಮೀಸಲಿನಲ್ಲಿ ನ್ಯಾಯ ಸಿಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಮನೆಬಾಗಿಲಿಗೆ ಸಮೀಕ್ಷೆ ಸಿಬ್ಬಂದಿ ಬಂದಾಗ ನಮ್ಮ ಸಮುದಾಯದ ಜನ ಕೊರಮ, ಕೊರಚ ಎಂದೇ ಜಾತಿ ಕಲಂನಲ್ಲಿ ನಮೂದಿಸಬೇಕು. ಇದರಿಂದ ಸಮರ್ಪಕ ಪಾಲು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ೪೦-೫೦ ಸಾವಿರ ಕೊರಮ ಕೊರಚ ಸಮುದಾಯದ ಜನರಿದ್ದು, ಎಲ್ಲರೂ ಕೂಡ ಯಾವುದೇ ಅಂಜಿಕೆ, ಕೀಳರಿಮೆ ಇಲ್ಲದೆ ತಮ್ಮ ಜಾತಿಯ ಹೆಸರನ್ನು ಧೈರ್ಯವಾಗಿ ಹೇಳಿ ಬರೆಯಿಸಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಟಿ.ಮೂರ್ತಿ, ಪ್ರದೀಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net