ಕೊಬ್ಬರಿಯಿಂದ ಎಣ್ಣೆ ತಯಾರಿಸಿ ಬೆಳೆಗಾರರಿಗೆ ನೆರವಾಗಿ

ಕೊಬ್ಬರಿಯಿಂದ ಎಣ್ಣೆ ತಯಾರಿಸಿ ಬೆಳೆಗಾರರಿಗೆ ನೆರವಾಗಿ
Published on

 ಹಾಸನ: ಹಾಸನ ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಕೊಬ್ಬರಿಯಿಂದ ಎಣ್ಣೆ ತಯಾರಿಸುವ ಮೂಲಕ ರೈತರಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ತಮ್ಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ್ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಹಾಸನ ಜಿಲ್ಲೆಯ ಶಾಸಕರಾದ ಎಚ್.ಡಿ ರೇವಣ್ಣ ಹಾಗೂ ಕೆ.ಎಂ. ಶಿವಲಿಂಗೇಗೌಡ ಅವರು ಕೇವಲ ಕೊಬ್ಬರಿಗೆ ಹೆಚ್ಚಿನ ಬೆಲೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಅದರಿಂದ ಇತರ ಉಪ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಯಾರೂ ಮಾತನಾಡಿಲ್ಲ. ಕೂಡಲೇ ಕೊಬ್ಬರಿಯಿಂದ ಎಣ್ಣೆ ಹಾಗೂ ಇನ್ನಿತರ ಉಪ ಉತ್ಪನ್ನಗಳನ್ನು ತಯಾರಿಸಿ ತೆಂಗು ಬೆಳೆಗಾರರಿಗೆ ಕೂಡ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮಾರುಕಟ್ಟೆಯಲ್ಲಿ ಇರುವ ಎಣ್ಣೆಗಳು ಕಲಬೆರಕೆಯಿಂದ ಕೂಡಿದೆ. ಜನರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಕೊಬ್ಬರಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಕೊಬ್ಬರಿ ಉತ್ಪನ್ನಗಳಿಗೆ ಬೆಲೆ ಹಾಗೂ ಉದ್ಯೋಗ ಸಿಗಬೇಕಾದರೆ ಗ್ರಾಮೀಣ ಮಟ್ಟದಲ್ಲಿ ಎಣ್ಣೆ ತಯಾರಿಕೆ ಗಾಣಗಳು ಹೆಚ್ಚಾಗಬೇಕು ಎಂದರು.ಸುದ್ದಿಗೋಷ್ಟಿಯಲ್ಲಿ ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net