ಕೊಬ್ಬರಿ ಖರೀದಿ ನೋಂದಣಿ ಆರಂಭ

dry-coconut-500x500
Published on

ಚಿತ್ರದುರ್ಗ: ನ್ಯಾಫೆಡ್ ಸಂಸ್ಥೆ ಪರವಾಗಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದಿಂದ 2024ನೇ ಸಾಲಿಗೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಉಂಡೆ ಕೊಬ್ಬರಿಯನ್ನು ಖರೀದಿಸಲು ರೈತರ ನೋಂದಣಿ ಆರಂಭವಾಗಲಿದೆ.

ಸರ್ಕಾರದ ನಿರ್ದೇಶನದಂತೆ ಪ್ರತಿ ಕ್ವಿಂಟಾಲ್‌ಗೆ 12ಸಾವಿರ ರೂ. ನಿಗದಿಪಡಿಸಲಾಗಿದೆ. ನೋಂದಣಿಗೆ 45 ದಿನಗಳ ಕಾಲವಕಾಶವಿದ್ದು, 3 ತಿಂಗಳವರೆಗೆ ಕೊಬ್ಬರಿ ಖರೀದಿ ಮಾಡಲಾಗುವುದು. ಪ್ರತಿ ರೈತರಿಗೆ 6 ಕ್ವಿಂಟಾಲ್ನಂತೆ ಗರಿಷ್ಠ 20 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಖರೀದಿ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ತೀರ್ಮಾನಿಸಿದೆ.

ಚಿತ್ರದುರ್ಗ, ಹಿರಿಯೂರು ಹಾಗೂ ಹೊಸದುರ್ಗ ಎಪಿಎಂಸಿಗಳಲ್ಲಿ ರೈತರು ಆಧಾರ್ ಕಾರ್ಡ್, ಎಫ್‌ಐಡಿ ಕಾರ್ಡ್‌ನೊಂದಿಗೆ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಹೊಸದುರ್ಗ ಎಪಿಎಂಸಿ ಆವರಣದಲ್ಲಿ ಎರಡು, ಚಿತ್ರದುರ್ಗ ಎಪಿಎಂಸಿಯಲ್ಲಿ ಈ ಬಾರಿ ಹೊಸದಾಗಿ ಕೊಬ್ಬರಿ ಖರೀದಿ ಕೇಂದ್ರವನ್ನು ಶಾಸಕರಾದ ಬಿ.ಜಿ.ಗೋವಿಂದಪ್ಪ, ಕೆ.ಸಿ.ವೀರೇಂದ್ರ ಪಪ್ಪಿ ಅವರ ಸೂಚನೆಯಂತೆ ತೆರೆಯಲಾಗಿದೆ. ಹಿರಿಯೂರಿನಲ್ಲೂ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಮಹಾಮಂಡಳಿಯ ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಬಸವೇಶ ಎಸ್.ನಾಡಿಗರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net