ಕೊಪ್ಪಳದಲ್ಲಿ ರೇಷ್ನೆ ಮೇಳ ಉದ್ಘಾಟನೆ

2707-Kpl-Ravi-4
Published on

ಕೊಪ್ಪಳ:ಸುಸ್ಥಿರ ಕೃಷಿಯಲ್ಲಿ ಒಂದಾದ ರೇಷ್ಮೆ ಕೃಷಿ ರೈತರಿಗೆ ನಿಶ್ಚಿತ ಆದಾಯ ಮೂಲ ಎಂದು ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಅಭಿಪ್ರಾಯಪಟ್ಟರು.


ನಗರದ ಶಿವಶಾಂತವೀರ ಮಂಗಲಭವನದಲ್ಲಿ ರೇಷ್ಮೆ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ರೇಷ್ಮೆ ಮೇಳ ಉದ್ಘಾಟಿಸಿ ಮಾತನಾಡಿದರು.


ಕೊಪ್ಪಳದಲ್ಲಿ ರೇಷ್ಮೆ ಕೃಷಿಗೆ ಯೋಗ್ಯ ವಾತಾವರಣವಿದೆ. ಆದರೆ, ಈ ಬಗ್ಗೆ ಹೆಚ್ಚಿನ ರೈತರಿಗೆ ಮಾಹಿತಿ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಸೌಲಭ್ಯಗಳಿವೆ. ರೇಷ್ಮೆ ಕೃಷಿಯಿಂದ ಉತ್ತಮ ಆದಾಯ ಗಳಿಸಬಹುದು. ಈ ಬಗ್ಗೆ ಇಲಾಖೆ ಅಧಿಕಾರಿಗಳು ಹಾಗೂ ಪ್ರಗತಿಪರ ರೈತರು ಇತರ ರೈತರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.


ರೇಷ್ಮೆ ನಿರ್ದೇಶನಾಲಯದ ಜಂಟಿ ನಿರ್ದೇಶಕಿ ಎಂ.ಎನ್.ಶಿಂಧೆ ಮಾತನಾಡಿ, ರೇಷ್ಮೆ ಕೃಷಿ ರೈತರಿಗೆ ಹೆಚ್ಚಿನ ಆದಾಯ ನೀಡುತ್ತದೆ. ಇತರ ಬೆಳೆಗಳಿಗಿಂತ ಅಧಿಕ ಲಾಭ ಗಳಿಸಬಹುದು. ನರೇಗಾದಡಿ ರೇಷ್ಮೆ ಕೃಷಿ ವಿಸ್ತರಣೆಗೆ ಅವಕಾಶವಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಇಲಾಖೆಯಿಂದ ಅರಿವು ಮೂಡಿಸಲಾಗುತ್ತಿದೆ ಎಂದರು.


ವಿಜ್ಞಾನಿ ಡಾ.ಆರ್.ಭಾಗ್ಯ, ಡಾ.ಉದಯ ಸಿ., ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕ ನಾಗಪ್ಪ ಬಿರಾದಾರ್, ಉಪನಿರ್ದೇಶಕ ಸಿ.ಅಂಜನಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸಿದರು. ವಿವಿಧ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು. ರೇಷ್ಮೆ ಕೃಷಿ ವಸ್ತುಪ್ರದರ್ಶನ ಗಮನ ಸೆಳೆಯಿತು. ರಾಯಚೂರು ಉಪ ನಿರ್ದೇಶಕ ಎಸ್.ರಾಜೇಂದ್ರ ಕುಮಾರ್, ಬಳ್ಳಾರಿ ಉಪನಿರ್ದೇಶಕ ಸುಧೀರ್, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net