ಕೊಪ್ಪಳದಲ್ಲಿ ತಂಪೆರೆದ ವರುಣ

0908-Kpl-Ravi-5
Published on

ಕೊಪ್ಪಳ:ನಗರ ಸೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬುಧವಾರ ಮೂರು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ರೈತಾಪಿ ವರ್ಗದಲ್ಲಿ ಹರ್ಷ ಮೂಡಿಸಿದೆ.


ಜುಲೈನಲ್ಲಿ ಅಬ್ಬರಿಸಿದ್ದ ಮಳೆರಾಯ ಆಗಸ್ಟ್ ಮೊದಲ ವಾರದಲ್ಲಿ ಬಂದಿರಲಿಲ್ಲ. ಶೇ.77ರಷ್ಟು ಬಿತ್ತನೆಯಾಗಿದ್ದು, ಈಗಾಗಲೇ ಬಿತ್ತಿದ ಬೆಳೆಗಳಿಗೂ ಮಳೆ ಅವಶ್ಯವಿತ್ತು. ಹೀಗಾಗಿ ರೈತರು ವರುಣನ ಆಗಮನಕ್ಕೆ ಕಾಯುತ್ತಿದ್ದರು. ಹವಾಮಾನ ಇಲಾಖೆ ವರದಿಯಂತೆ ಬುಧವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ಸಂಜೆವರೆಗೂ ಮುಂದುವರೆಯಿತು.

ನೀರಿನ ಪ್ರಮಾಣ ಕ್ಷೀಣಿಸಿದ್ದ ಹಳ್ಳಗಳು ಭರ್ತಿಯಾಗಿ ತುಂಬಿ ಹರಿದಿವೆ. ಹಸಿ ಮಳೆಯಾಗಿದ್ದು, ಮತ್ತೊಂದು ವಾರದವರೆಗೆ ಬೆಳೆಗಳಿಗೆ ತೇವಾಂಶದ ಕೊರತೆ ಇಲ್ಲದಂತಾಗಿದೆ. ರೈತರ ಆತಂಕ ಸದ್ಯಕ್ಕೆ ನಿವಾರಣೆಯಾಗಿದೆ. ಗುರುವಾರವೂ ಜಿಲ್ಲೆಯಲ್ಲಿ ಮಳೆ ಮುಂದುವರೆಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅನ್ನದಾತರ ಭರವಸೆ ಹೆಚ್ಚುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net