ಕೊಪ್ಪಳದಲ್ಲಿ ಟಿಇಟಿ ಕಾರ್ಯಾಗಾರ ಜು.31ರಂದು

TET
Published on

ಕೊಪ್ಪಳ: ನಗರದ ಹೊರ ವಲಯದ ರಾಜೀವಗಾಂಧಿ ರೂರಲ್ ಬಿ.ಇಡಿ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ
ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಟಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಜು.31ರಂದು ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

ಖ್ಯಾತ ಶಿಕ್ಷಣ ತಜ್ಞ ಡಾ.ಜಗದೀಶ ಬಸಾಪೂರ, ಶೈಕ್ಷಣಿಕ ಮನೋವಿಜ್ಞಾನ ವಿಷಯದ ಪ್ರಮುಖ ಪರಿಕಲ್ಪನೆಗಳಲ್ಲಿ ಒಂದಾದ ಕಲಿಕೆ ಸಂಭಂದಿಸಿದಂತೆ ಒಂದು ದಿನದ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಿ.ಇಡಿ ಪದವೀಧರರು ಮತ್ತು ಪ್ರಸ್ತುತ ಬಿ.ಇಡಿ ವ್ಯಾಸಂಗ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳು ಕಾರ್ಯಗಾರದಲ್ಲಿ ಪಾಲ್ಗೊಳ್ಳಬಹುದು. ಮೊದಲು ಬಂದವರಿಗೆ ಆಸನ ವ್ಯವಸ್ಥೆ ಕಲ್ಪಿಸುವುದಾಗಿ ಕಾಲೇಜು ಪ್ರಾಚಾಯ ವಿನೋದ ಹೂಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net