

ಕೊಪ್ಪಳ :ಕೇಂದ್ರ ಸರ್ಕಾರ ಅಮೃತ ಭಾರತ್ ಸ್ಟೇಷನ್ ಸ್ಕೀಂ ಅಡಿ ದೇಶದ 500 ರೈಲ್ವೆ ನಿಲ್ದಾಣ ಮರು ಅಭಿವೃದ್ಧಿಗೆ ಮುಂದಾಗಿದ್ದು, ಇದರಲ್ಲಿ ಕೊಪ್ಪಳ ಹಾಗೂ ಮುನಿರಾಬಾದ್ ರೈಲ್ವೆ ನಿಲ್ದಾಣಗಳು ಒಳಗೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಏಕ ಕಾಲಕ್ಕೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯದ 40 ರೈಲ್ವೆ ನಿಲ್ದಾಣಗಳು ಯೋಜನೆಯಡಿ ಒಳಗೊಂಡಿವೆ. ಅವುಗಳಲ್ಲಿ ಕೊಪ್ಪಳ ಹಾಗೂ ಮುನಿರಾಬಾದ್, ಬಳ್ಳಾರಿ, ಹೊಸಪೇಟೆ ನಿಲ್ದಾಣಗಳು ಸೇರ್ಪಡೆಯಾಗಿವೆ. ಈ ಮೂಲಕ ಬಹುಕಾಲದ ಬೇಡಿಕೆಯಾಗಿದ್ದ ನಿಲ್ದಾಣ ನವೀಕರಣಕ್ಕೆ ಯೋಗ ಕೂಡಿ ಬಂದಂತಾಗಿದೆ. 20 ಸಾವಿರ ಕೋಟಿ ರೂ. ಮೊತ್ತದ ಬೃಹತ್ ಯೋಜನೆಯಾಗಿದ್ದು, ನಿಲ್ದಾಣಗಳನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.