

ಮದ್ದೂರು: ತಾಲೂಕಿನ ಕೊಪ್ಪದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀದೇವಿ, ಶ್ರೀ ಪಟ್ಟಲದಮ್ಮ ದೇವಿಗೆ ಆಬಲವಾಡಿ ಹಾಗೂ ಟಿ.ಬೆಳ್ಳಕೆರೆ ಗ್ರಾಮದ ಮಹಿಳೆಯರು ಶುಕ್ರವಾರ ತಂಬಿಟ್ಟಿನ ಆರತಿ ಪೂಜೆ ನೆರವೇರಿಸಿದರು. ಆಬಲವಾಡಿ ಗ್ರಾಮದ ಲಕ್ಷ್ಮೀದೇವಿ, ಬಂಕನಕಟ್ಟಮ್ಮ, ಬೆಳ್ಳೆಕೆರೆಯ ದಂಡನೇಶ್ವರಿದೇವಿಗೆ ಪೂಜೆ ಸಲ್ಲಿಸಿದರು. ಕೋವಿಡ್ ಕಾರಣದಿಂದ 3 ವರ್ಷದಿಂದ ಸ್ಥಗಿತವಾಗಿದ್ದ ಆರತಿ ಮಹೋತ್ಸವದಲ್ಲಿ ತಮಟೆ ಕಲಾವಿದರು, ಜವಳಿ ಕುಣಿತ ಕಲಾವಿದರು ಮೆರುಗು ನೀಡಿದರು. ಮಹೋತ್ಸವದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಕೈಂಕರ್ಯಗಳನ್ನು ನೆರವೇರಿಸಲಾಯಿತು.