ಕೊಪ್ಪ ಪಿಕಾರ್ಡ್ ಬ್ಯಾಂಕ್‌ಗೆ ರೂ.93.80 ಲಕ್ಷ ಲಾಭ

kpp piocard
ಕೊಪ್ಪದಲ್ಲಿ ಪಿಕಾರ್ಡ್ ಬ್ಯಾಂಕ್ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು. ಅಧ್ಯಕ್ಷ ಎಚ್.ಎಸ್.ಇನೇಶ್, ಕೆ.ಆರ್.ಶ್ರೀನಿವಾಸ್, ಸಾಯಿನಾಥ್, ಬಿ.ಎಸ್.ಸತೀಶ್ ಇತರರಿದ್ದರು.
Published on

ಕೊಪ್ಪ: ಪ್ರಾಥಮಿಕ ಸಹಕಾರ ಕಷಿ ಮತ್ತು ಗ್ರಾಮೀಣ ಅಭಿವದ್ಧಿ ಬ್ಯಾಂಕ್(ಪಿಕಾರ್ಡ್) 93.80 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಶೇ.50.28 ರಷ್ಟು ಸಾಲ ವಸೂಲಾತಿ ಸಾಧಿಸಿದೆ. ಶೇ.98.13 ರಷ್ಟು ಚಾಲ್ತಿ ಸಾಲ ವಸೂಲಿಯಾಗಿದ್ದು, ಶೇ.10ರಷ್ಟು ಷೇರು ಡಿವಿಡೆಂಡ್ ನೀಡಲಾಗಿದೆ ಎಂದು ಅಧ್ಯಕ್ಷ ಎಚ್.ಎಸ್.ಇನೇಶ್ ತಿಳಿಸಿದರು.

ಶುಕ್ರವಾರ ಆಯೋಜಿಸಿದ್ದ ಪಿಕಾರ್ಡ್ ಬ್ಯಾಂಕ್ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸುಸ್ತಿದಾರರಿಂದ ಸಾಲ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಎರಡು ವರ್ಷದಿಂದ ಬ್ಯಾಂಕ್ ಲಾಭದಲ್ಲಿದೆ ಎಂದರು.

ಸದಸ್ಯ ನವೀನ್ ಕರುವಾನೆ ಮಾತನಾಡಿ, ಸುಸ್ತಿ ಸಾಲಗಾರರಿಂದ ವಸೂಲಾತಿ ಕ್ರಮದಲ್ಲಿ ಟಾಂಟಾಂ ಹೊಡೆಯಬಾರದು. ಇದರಿಂದ ಸಾರ್ವಜನಿಕವಾಗಿ ಕುಟುಂಬದ ಗೌರವಕ್ಕೆ ಧಕ್ಕೆಯಾಗುತ್ತದೆ. ಇಂಥ ಕ್ರಮ ರಾಷ್ಟ್ರೀಕತ ಬ್ಯಾಂಕ್‌ಗಳು ಪಾಲಿಸುತ್ತವೆ. ನಮ್ಮ ಬ್ಯಾಂಕ್ ಸ್ವಲ್ಪ ಅನುಕಂಪ ತೋರಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಎಸ್.ಇನೇಶ್, ಸುಸ್ತಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಿಮ್ಮನ್ನು ಯಾಕೆ ವಜಾ ಮಾಡಬಾರದು ಎಂದು ನಮ್ಮನ್ನು ಸರ್ಕಾರ ಪ್ರಶ್ನಿಸುತ್ತದೆ. ಈ ಬಾರಿ ವಸೂಲಾತಿ ಪ್ರಮಾಣ ಕೂಡ ಕುಸಿದಿದೆ. ಕೋಟಿ ವೆಚ್ಚದ ಮನೆ ಕಟ್ಟಿದವರು ಸಾಲ ಮರುಪಾವತಿಗೆ ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಇಂಥ ಸುಸ್ತಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಹೇಗೆ ವಸೂಲಿ ಮಾಡುವುದು ಎಂದರು.

ಬ್ಯಾಂಕ್ ಉಪಾಧ್ಯಕ್ಷ ಕೆ.ಆರ್.ಶ್ರೀನಿವಾಸ್, ನಿರ್ದೇಶಕರಾದ ಎನ್.ಎಲ್.ನಾಗೇಶ್, ಎಚ್.ಎಂ.ಬಡಿಯಣ್ಣ, ಕೆ.ಸಾಯಿನಾಥ್, ಬಿ.ಎಸ್.ಸತೀಶ್, ಟಿ.ಕೆ.ಬಡಿಯಣ್ಣ, ಎಚ್.ಇ.ಆದರ್ಶ, ಎಚ್.ಎಸ್.ಗೋಪಾಲನಾಯ್ಕ, ಎಸ್.ಎಸ್.ಧನ್ಯ, ಲಕ್ಷ್ಮಮ್ಮ, ಬಿ.ಆರ್.ಗಣೇಶ್, ಜೆ.ಎಂ.ಶ್ರೀಹಷರ್, ಎಸ್.ಎನ್.ಪುಟ್ಟರಾಜು, ಬ್ಯಾಂಕ್ ಪ್ರಭಾರ ವ್ಯವಸ್ಥಾಪಕ ಶ್ರೀಮಂತ ಎಂ.ವಾಲಿಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net