ಕೊಪ್ಪ ಕೃಷಿ ಪತ್ತಿನ ಸಂಘಕ್ಕೆ ರಾಮಕೃಷ್ಣ ಅಧ್ಯಕ್ಷ

I18M.D.R.1
Published on

ಮದ್ದೂರು: ತಾಲೂಕಿನ ಕೊಪ್ಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಚಿಕ್ಕೋನಹಳ್ಳಿ ಗ್ರಾಮದ ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಹಿಂದಿನ ಅಧ್ಯಕ್ಷರಾಗಿದ್ದ ಕೊಪ್ಪದ ಕೆ.ಜೆ. ಕೃಷ್ಣೇಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಚಿಕ್ಕೋನಹಳ್ಳಿ ಗ್ರಾಮದ ರಾಮಕೃಷ್ಣ ಅವರನ್ನು ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಶಾ ಘೋಷಿಸಿದರು.


ಸಹಕಾರ ಸಂಘದ ನಿರ್ದೇಶಕರು, ರೈತರು ಹಾಗೂ ಗ್ರಾಮದ ಮುಖಂಡರು ಅಧ್ಯಕ್ಷರನ್ನು ಅಭಿನಂದಿಸಿದರು.
ರಾಮಕೃಷ್ಣ ಮಾತನಾಡಿ, 17 ಹಳ್ಳಿಗಳು ನಮ್ಮ ಸಹಕಾರ ಸಂಘಕ್ಕೆ ಒಳಪಡುತ್ತವೆ. 17 ಗ್ರಾಮಗಳ ರೈತರಿಗೂ ಸಹಕಾರ ಸಂಘದಿಂದ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೊಪ್ಪ ಪಿಎಸಿಎಸ್ ಉಪಾಧ್ಯಕ್ಷ ಕೊಪ್ಪ ಕೆ.ರಮೇಶ್, ನಿರ್ದೇಶಕರಾದ ಡಿ.ಹೊಸಹಳ್ಳಿ ಎಚ್.ಬಿ.ಶಿವಣ್ಣ, ಕೊಪ್ಪ ಕೆ.ಜೆ.ಕೃಷ್ಣೇಗೌಡ, ತಗ್ಗಹಳ್ಳಿ ಟಿ.ಕಾಂತರಾಜು, ಆಬಲವಾಡಿ ಟಿ.ಪುಟ್ಟಸ್ವಾಮಿ, ಕೊಪ್ಪ ಲಕ್ಷ್ಮಮ್ಮ ಈರೇಗೌಡ, ಕೊಪ್ಪ ಬಿ.ಪಿ.ಮಂಜುಳಾ ಚಂದ್ರಶೇಖರ್, ಕೊಪ್ಪ ಕೆ.ಜಿ.ಜಯರಾಮು, ಕೊಪ್ಪ ಕೆ.ಲಿಂಗರಾಜು, ಕೊಪ್ಪ ಶಿವಲಿಂಗೇಗೌಡ, ತಗ್ಗಹಳ್ಳಿ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿವಾಕರ್, ಮನ್‌ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಮುಖಂಡರಾದ ಚಿಕ್ಕೋನಹಳ್ಳಿ ತಮ್ಮಯ್ಯ, ಸಿದ್ದೇಗೌಡ, ಚಿಕ್ಕಪುಟ್ಟೇಗೌಡ, ಕೆ.ಎಸ್.ಪುಟ್ಟಸ್ವಾಮಿ, ಎಂಡಿಸಿಸಿ ಮೇಲ್ವಿಚಾರಕ ಎಸ್.ಬಿ.ರವೀಂದ್ರ ಕುಮಾರ್, ಮಹಾದೇವ, ಸಿಬ್ಬಂದಿ ಕೆ.ಅಶೋಕ, ಶ್ರುತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net