ಕೊಡುವುದರಲ್ಲಿ ನೆಮ್ಮದಿ ಕಾಣಬೇಕು

07hbd1
Published on

ಹಳೇಬೀಡು: ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ನೆಮ್ಮದಿ ಕಾಣಬೇಕು ಎಂದು ಖ್ಯಾತ ಚಿಂತಕ ಡಾ.ಗುರುರಾಜ ಕರ್ಜಗಿ ಹೇಳಿದರು.

ಗುರುವಾರ ಸಂಜೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಆರನೇ ದಿನದ ಕಾರ್ಯಕ್ರಮದಲ್ಲಿ ಬದುಕಿನಲ್ಲಿ ಸಂತೋಷ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ನಮ್ಮ ಪರಿಸರವನ್ನು ಸಂತೋಷವಾಗಿಡಲು ನಾವು ಸದಾ ಸಂತಸದಿಂದ ಇರುವುದನ್ನು ಕಲಿಯಬೇಕು. ಜಗತ್ತಿನಲ್ಲಿ ನೂರಾರು ಸೊಗಸು, ಸೌಂದರ್ಯಗಳಿದ್ದು, ಅದನ್ನು ಆಸ್ವಾದಿಸಬೇಕು. ಕೇವಲ ತಪ್ಪನ್ನು ಹುಡುಕಿಕೊಂಡು ಹೋಗುವುದು ಅಸಹ್ಯಕರ ಜೀವನವಾಗುತ್ತದೆೆ. ನಮ್ಮ ಜತೆಗೆ ಉತ್ತಮ ಭಾವನೆಗಳ ವಾತಾವರಣವನ್ನು ನಾವು ಕೊಂಡೊಯ್ಯಬೇಕು. ಆ ಮೂಲಕ ಎಲ್ಲರಲ್ಲೂ ಆನಂದವನ್ನು ಕಾಣಲು ಕಾತುರರಾಗಿರಬೇಕು ಎಂದರು.

ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ ಮಾತನಾಡಿ, ರೈತರ ಹೋರಾಟಗಳಿಗೆ ಜೀವ ತುಂಬಿದ ಸಿರಿಗೆರೆ ಶ್ರೀಗಳ ಮಾನವೀಯ ಕಾರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ಸ್ವಾಮೀಜಿಯವರ ಪರಿಸರ ಕಾಳಜಿ ಮೆಚ್ಚುವಂತದ್ದಾಗಿದ್ದು ಎಂದರು. ಸಚಿವ ಸಿ.ಸಿ.ಪಾಟೀಲ್, ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದುಬಂದ ದಾರಿಯನ್ನು ಸ್ಮರಿಸಿದರು.

ಚಿಂತಕ ಚಟ್ನಳ್ಳಿ ಮಹೇಶ್ ಮತ್ತು ಅರುಣ್‌ಕುಮಾರ್ ಉಪನ್ಯಾಸ ನೀಡಿದರು. ಆನಂದಪುರ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮರುಘರಾಜೇಂದ್ರ ಸ್ವಾಮೀಜಿ ದೇವರ ಅಸ್ತಿತ್ವದ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಜಿಪಂ ಸಿಇಒ ಪರಮೇಶ್, ತಹಸೀಲ್ದಾರ್ ಎನ್.ನಟೇಶ್, ಮಾಜಿ ಶಾಸಕ ಬಿ.ಆರ್.ಗುರುದೇವ್, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net