

ಪ್ರಕಾಶ ವಿ.ಅಸುಂಡಿ ಕಟಕೋಳ: ಬೆಳಗಾವಿ ಜಿಲ್ಲೆಯ ಹಲವು ಐತಿಹಾಸಿಕ ಸಂಸ್ಥಾನ, ರಾಜಮನೆತನಗಳನ್ನು ಕಂಡ ಗಂಡುಮೆಟ್ಟಿನ ನೆಲ. ವೀರರು, ಶೂರರು ಆಳಿಹೋದ ಈ ನೆಲ ಕ್ರಾಂತಿಯ ಕಿಡಿ ಹೊತ್ತಿಸಿದ ಧೀಮಂತರ ಬೀಡು. ಇಂಥ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೊರಗಲ್ಲದ ಕೊಡುಗೈದಾನಿ, ಏಳು ಸುತ್ತಿನ ಕೋಟೆಯ ಒಡೆಯ ನರಸೋಜಿರಾವ್ ಶಿಂಧೆ ಅವರು ಜನಕಲ್ಯಾಣ ಹಾಗೂ ಪ್ರಜಾಹಿತಕ್ಕಾಗಿ ಶ್ರಮಿಸಿದ ಮಹಾರಾಜರು. ಕಲಿಯುಗದ ಕರ್ಣನಂತೆ ಬಾಳಿ ಬದುಕಿದವರು ತೊರಗಲ್ ಸಂಸ್ಥಾನದ ಮಹಾರಾಜ ನರಸೋಜಿರಾವ್ ಶಿಂಧೆ.
ತಮ್ಮ 18ನೇ ವಯಸ್ಸಿನಲ್ಲಿ ಸ್ವದೇಶಕ್ಕೆ ಆಗಮಿಸಿದ ನರಸೋಜಿ ಮಹಾರಾಜರು, ಮಹಾರಾಷ್ಟ್ರದ ಕೊಲ್ಲಾಪುರ, ಪಾಂಚಗಣಿ ಮತ್ತು ಬೆಂಗಳೂರು ಮಹಾನಗರಗಳಲ್ಲಿ ಮುಂದಿನ ಶಿಣ ಪೂರೈಸಿದರು. ನಂತರ ರಾಮದುರ್ಗ ತಾಲೂಕಿನಲ್ಲಿ ಅಸ್ತಿತ್ವದಲ್ಲಿದ್ದ ತೊರಗಲ್ ರಾಜಮನೆತನದ ಕಾರ್ಯಭಾರ ವಹಿಸಿಕೊಂಡರು. 1931ರಲ್ಲಿ ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರ ಸಹೋದರನ ಪುತ್ರಿ ಸುವರ್ಣದೇವಿ ಅವರನ್ನು ವಿವಾಹವಾದರು. 1932ರ ಜೂನ್ 3ರಂದು ಸಂಸ್ಥಾನದ ರಾಜರಾಗಿ ಪಟ್ಟಾಭಿಷೇಕ ಸ್ವೀಕರಿಸಿದ ನಂತರ ನರಸೋಜಿರಾವ್ ಅವರು ತಮ್ಮ ಪ್ರಜೆಗಳ ೇಮಾಭಿವೃದ್ಧಿಗಾಗಿ ಕೆಲವೊಂದು ಆಡಳಿತಾತ್ಮಕ ಬದಲಾವಣೆಗಳನ್ನು ತರುವ ಉದ್ದೇಶದಿಂದ ಕೆನಡಾ, ಜಪಾನ್, ಶ್ರೀಲಂಕಾ, ಚೀನಾ ಮತ್ತಿತರ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿಯ ಆಡಳಿತ ವೈಖರಿ, ಕಾನೂನುಗಳು ಮತ್ತು ಪ್ರಜೆಗಳಿಗೆ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಈ ಭಾಗದಲ್ಲಿ ಜಾರಿಗೆ ತರಲು ಪ್ರಯತ್ನಿಸಿದವರು ನರಸೋಜಿ ಮಹಾರಾಜರು.
ಉತ್ತರ ಕರ್ನಾಟಕದ ಜಾಗೃತ ದೈವ ಗೊಡಚಿ ವೀರಭದ್ರ ದೇವರ ಪರಮ ಭಕ್ತರಾಗಿದ್ದ ಕಿಲ್ಲಾ ತೊರಗಲ್ಲದ ಮಹಾರಾಜ ನರಸೋಜಿರಾವ್ ಮುರಾರಿರಾವ್ ಶಿಂಧೆ ಅವರು ಗೊಡಚಿ ಹಾಗೂ ಸುತ್ತಲಿನ ಭಾಗದಲ್ಲಿ ಜನಮಾನಸದ ದೊರೆಯಾಗಿದ್ದರು. ನರಸೋಜಿರಾವ್ ಅವರು ರಾಮದುರ್ಗ ತಾಲೂಕು ತೊರಗಲ್ ಗ್ರಾಮದ ಏಳುಸುತ್ತಿನ ಕೋಟೆಯಲ್ಲಿ 1910ರ ಜುಲೈ 7ರಂದು ಜನಿಸಿದರು. ಅಲ್ಪ ವಯಸ್ಸಿನಲ್ಲಿ ತಂದೆ ತಾಯಿ ಕಳೆದುಕೊಂಡಿದ್ದರಿಂದ ಕೊಲ್ಲಾಪುರ ಶಾಹು ಮಹಾರಾಜರು ಮಿಸ್ ಎಂ.ಈ.ಪ್ಯಾಟರಸನ್ ಎಂಬ ದಾದಿಯೊಡನೆ ನರಸೋಜಿರಾವ್ ಅವರನ್ನು ಆರೈಕೆ, ಪಾಲನೆ, ಶಿಣಕ್ಕಾಗಿ 6ನೇ ವಯಸ್ಸಿನಲ್ಲಿಯೇ ಕೆನಡಾ ದೇಶಕ್ಕೆ ಕಳುಹಿಸಿದರು.
ತಮ್ಮ ಆಡಳಿತವನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ನರಸೋಜಿರಾವ್ ಆಗಿನ ತೊರಗಲ್ ಸಂಸ್ಥಾನದಲ್ಲಿ ಇದ್ದ 36 ಹಳ್ಳಿಗಳಿಗೆ ಒಂಬತ್ತು ಇನಾಮದಾರರನ್ನು ನೇಮಕಗೊಳಿಸಿದರು. ಎಲ್ಲ ಹಳ್ಳಿಗಳ ಪ್ರತಿಯೊಬ್ಬ ಪ್ರಜೆಗಳ ಕಷ್ಟ&ನಷ್ಟಗಳ ಬಗ್ಗೆ ಗಮನಹರಿಸಿದರು. ಆಗಿನ ಕಾಲದಲ್ಲಿ ಭಾರತದಲ್ಲಿ ಬ್ರಿಟಿಷ್ ಪ್ರಾಬಲ್ಯವಿತ್ತು. ಆದರೆ, ಬ್ರಿಟಿಷರು ರೂಪಿಸುತ್ತಿದ್ದ ಹೊಸ ಕಾಯ್ದೆಗಳ ಪರಿಣಾಮ ತಮ್ಮ ಸಂಸ್ಥಾನದ ಜನರ ಮೇಲೆ ನೇರವಾಗಿ ಬೀಳದಂತೆ ಶಿಂಧೆ ರಾಜ್ಯಭಾರ ನಡೆಸಿದರು. 1952ರಲ್ಲಿ ಗೊಡಚಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿ ದೇವಸ್ಥಾನದ ಎಲ್ಲ ಕಾರ್ಯಕ್ರಮಗಳು ಸರಾಗವಾಗಿ ನಡೆದುಕೊಂಡು ಹೋಗಲು ದೇವಸ್ಥಾನಕ್ಕೆ ತಮ್ಮ ನೂರಾರು ಎಕರೆ ಜಮೀನು ದಾನವಾಗಿ ನೀಡಿದರು. 1937ರಲ್ಲಿ ನಿರ್ಮಾಣವಾಗಿರುವ ಚಂದರಗಿಯಲ್ಲಿದ್ದ ತಮ್ಮ ಬೇಸಿಗೆ ಅರಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಕ್ರೀಡಾಶಾಲೆ ಸ್ಥಾಪಿಸಲು ದಾನ ನೀಡುವ ಮೂಲಕ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದರು. ತಮ್ಮ ಸಂಸ್ಥಾನದಲ್ಲಿ ಇದ್ದ ಸಾವಿರಾರು ಎಕರೆ ಕಷಿ ಭೂಮಿಯನ್ನು ರೈತರಿಗೆ ದಾನವಾಗಿ ನೀಡಿದರು. ನಮ್ಮ ದೇಶಕ್ಕೆ ಸ್ವಾತಂತ್ರ ದೊರಕಿದ ನಂತರ ತೊರಗಲ್ ಸಂಸ್ಥಾನವು ಸರ್ಕಾರದಲ್ಲಿ ವಿಲೀನಗೊಂಡಿತು. ಸಂಸ್ಥಾನ ವಿಲೀನಗೊಂಡ ಬಳಿಕ ತಮ್ಮ ಪಾಲಿಗೆ ಬಂದ ಆಸ್ತಿಯಲ್ಲಿ ತಮ್ಮ ಕುಟುಂಬದ ಸದಸ್ಯರು ಒಟ್ಟಿಗೆ ಸೇರಿ ಕಷಿ ಕಾರ್ಯವನ್ನು ಕೈಗೊಂಡು ಸರಳ ಜೀವನ ನಡೆಸಿದರು. ರಾಮದುರ್ಗ ತಾಲೂಕಿಗೆ ಪ್ರಪ್ರಥಮವಾಗಿ ಕಬ್ಬು ಬೆಳೆ ಪರಿಚಯಸಿದ ಕೀರ್ತಿ ಮಹಾರಾಜರಿಗೆ ಸಲ್ಲುತ್ತದೆ.
ಇಂದು 114ನೇ ಜಯಂತ್ಯುತ್ಸವ > ಕಲಿಯುಗದ ಕರ್ಣನೆಂದೇ ಖ್ಯಾತಿ
ತಮ್ಮ ಸರಳ ಜೀವನ, ಉತಷ್ಟ ವಿಚಾರಧಾರೆ ಮತ್ತು ಸಾಧಾರಣ ಜೀವನಶೈಲಿಯ ಮೂಲಕ ತೊರಗಲ್, ಗೊಡಚಿ, ಚಂದರಗಿ ಹಾಗೂ ಅಕ್ಕಪಕ್ಕದ 36 ಗ್ರಾಮಗಳ ಜನರ ಪಾಲಿಗೆ ಪ್ರತ್ಯ ದೆವದಂತಿದ್ದ ನರಸೋಜಿರಾವ್ ಅವರ ಜೀವನ ಸಾಧನೆ, ಉಪಕಾರ ಗುಣವನ್ನು ಈ ಭಾಗದ ಜನರು ಇಂದಿಗೂ ನೆನೆಯುತ್ತಾರೆ. ಅವರ ಕುಟುಂಬದ ಸದಸ್ಯರಿಗೆ ಈ ಗ್ರಾಮಗಳ ಜನರು ಇಂದಿಗೂ ಬಹಳ ಗೌರವ ನೀಡುತ್ತಾರೆ. ಗೊಡಚಿ ೇತ್ರದ ವೀರಭದ್ರನ ಸನ್ನಿಧಿಯಲ್ಲಿ ಶಿಂಧೆ ವಂಶಸ್ಥರ ಮುಂದಾಳತ್ವದಲ್ಲಿ ಸಕಲ ವಿಧಿ&ವಿಧಾನಗಳು ಸುಗಮವಾಗಿ ನಡೆಯುತ್ತವೆ. ಹಾಗಾಗಿ ಜನರು ಇದಿಗೂ ಶಿಂಧೆ ಕುಟುಂಬವನ್ನು ಪ್ರೀತಿ, ಆದರದಿಂದ ಕಾಣುತ್ತಾರೆ. ಹಿಂದಿನ ಕಾಲದ ಶಿಂಧೆ ಕುಟುಂಬಸ್ಥರ ಆದರ್ಶ ಜೀವನ ಇಂದಿಗೂ ಈ ಭಾಗದ ಜನಮಾನಸದಲ್ಲಿ ಉಳಿದಿದೆ ಎಂದರೆ ಅತಿಶಯೋಕ್ತಿಯೇನಲ್ಲ. ನರಸೋಜಿರಾವ್ ಶಿಂಧೆ ಅವರ 114ನೇ ಜಯಂತ್ಯುತ್ಸವ ಜು.7ರಂದು ಜರುಗಲಿದ್ದು, ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ,.
ತೊರಗಲ್ಲ ಸಂಸ್ಥಾನ ದೊರೆ ನರಸೋಜಿರಾವ್ ಶಿಂಧೆ