ಕೊಡಸೋಗೆಯಲ್ಲಿ ಕ್ಷೇತ್ರೋತ್ಸವ

13Rajesh15
Published on

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಆಲೂಗಡ್ಡೆ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಗ್ರಾಮದ 12 ಜನ ರೈತರ ತಾಕುಗಳಲ್ಲಿ ಪ್ರಾತ್ಯಕ್ಷಿಕೆ ಮಾಡಲಾಗಿದೆ. ಮ್ಯಾಂಕೋಜೆಬ್ 2.5 ಗ್ರಾಂ ಪ್ರತಿ ಲೀಟರ್ ನೀರಿನ ದ್ರಾವಣದೊಂದಿಗೆ ಕನಿಷ್ಠ 5 ರಿಂದ 10 ನಿಮಿಷ ಆಲೂಗಡ್ಡೆಯ ಉಪಚಾರವನ್ನು ಮಾಡಬೇಕು. ನಾಟಿಗೆ ಮುನ್ನ ಟ್ರೈಕೋಡರ್ಮ ಹಾರ್ಜೆನಿಯಂ, ಸೂಡೋಮೋನೋಸ್ ಫ್ಲೋರೋಸೆನ್ಸ್ ಮತ್ತು ಪೆಸಿಲೋಮೈಸಿಸ್ ಜೈವಿಕ ಜೀವಾಣುಗಳಿಂದ ಸಮೃದ್ಧಗೊಳಿಸಿದ ಕೊಟ್ಟಿಗೆ ಗೊಬ್ಬರ ಬಳಕೆ, ಬೇವಿನ ಹಿಂಡಿ ಬಳಸಬೇಕೆಂದು ತಿಳಿಸಲಾಯಿತು.

ವಿಜ್ಞಾನಿ ಡಾ. ಮೋಹನ್ ಕುಮಾರ್ ಆಲೂಗೆಡ್ಡೆ ಬೆಳೆಯ ತಾಂತ್ರಿಕ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಹಿರಿಯ ತಾಂತ್ರಿಕ ಅಧಿಕಾರಿ ಡಾ.ಪಂಪನಗೌಡ ಅಧಿಕಾರಿಗಳು ಆಲೂಗೆಡ್ಡೆ ಬೆಳೆಯಲ್ಲಿ ಬರುವ ಕೀಟ ಮತ್ತು ರೊಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕೇಂದ್ರದ ಮುಖ್ಯಸ್ಥ ಡಾ.ನರೇಶ್ ಮತ್ತು ಸುಮಾರು 120 ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net