ಕೊಡಸಾಗೆ ಗೆಲುವು ತಂದ ಚೀಟಿ

Published on

ಸೇಡಂ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವಿವಿಧ ಇಲಾಖೆಯ 9 ನಿರ್ದೇಶಕರ ಸ್ಥಾನಕ್ಕೆ ಸೋಮವಾರ ಮತದಾನ ನಡೆದಿದ್ದು, ಶಾಂತಿಯುತವಾಗಿ ಪ್ರಕ್ರಿಯೆ ನಡೆದಿದೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ ಛತ್ರೆ, ಸಹಾಯಕ ಚುನಾವಣಾಧಿಕಾರಿ ಶಂಕ್ರಪ್ಪ ಮಾಸ್ಟರ್ ಕೋಸಗಿ ತಿಳಿಸಿದ್ದಾರೆ.

ಒಟ್ಟು 34 ನಿರ್ದೇಶಕ ಸ್ಥಾನದ ಪೈಕಿ 25ಕ್ಕೆ ಅವಿರೋಧ ಆಯ್ಕೆಯಾಗಿತ್ತು. ಕಂದಾಯ, ಆರೋಗ್ಯ, ಪದವಿ, ಪಿಯು ಕಾಲೇಜು ವಿಭಾಗ, ಸಮಾಜ ಕಲ್ಯಾಣ, ಅಬಕಾರಿ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯ್ಕೆಯಾಗುವ 9 ಸ್ಥಾನಗಳಿಗೆ ಚುನಾವಣೆ ನಡೆಯಿತು. ಅಬಕಾರಿ ಇಲಾಖೆಯ ಗುರುಶಾಂತ, ಮಹಿಳಾ ಮತ್ತು ಕಲ್ಯಾಣದ ಮಹೇಶ್ವರಿ, ಕಂದಾಯ ಇಲಾಖೆಯ ವಿಜಯಕುಮಾರ, ಬುಗ್ಗಮ್ಮ, ಸಮಾಜ ಕಲ್ಯಾಣ ಇಲಾಖೆಯ ಸಂತೋಷ ಸಿಂಧೆ, ಪಿಯುಸಿ ಮತ್ತು ಪದವಿ ಕಾಲೇಜು ವಿಭಾಗದ ಜಗನ್ನಾಥರಾವ, ಆರೋಗ್ಯ ಇಲಾಖೆಯ ಜಯಪ್ರಕಾಶ, ನಿರ್ಮಲಾ ಗೆಲುವು ಸಾಧಿಸಿದರು. ಕೃಷಿ ಇಲಾಖೆಯಿಂದ ಸ್ಪರ್ಧಿಸಿದ್ದ ಬಸವರಾಜ ಕೊಡಸಾ, ಸೈಯದ್ ಆಸೀಫ್ ಹುಸೇನ್ ಕ್ರಮವಾಗಿ 11 ಮತ ಪಡೆದು ಸಮಬಲ ಸಾಧಿಸಿದರು. ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಬಸವರಾಜ ಕೊಡಸಾ ಗೆಲುವು ಸಾಧಿಸಿದರು.

ಅವಿರೋಧ ಆಯ್ಕೆ: ಮುರಳಿಧರ (ಪಶು ಇಲಾಖೆ), ಗಿರಿಶಂಕರ (ಲೋಕೋಪಯೋಗಿ), ವೀರಭದ್ರಪ್ಪ (ಪಂಚಾಯತ್‌ರಾಜ್), ಶಿವಾನಂದ ಕಂಬಡಮಠ (ಗ್ರಾಮೀಣ ಸಡಕ್), ನದೀಮ್ ಪಟೇಲ್, ರವಿರಾಜ್ (ಪ್ರಾಥಮಿಕ ಶಿಕ್ಷಣ), ಶಿವಶರಣಪ್ಪ (ಪ್ರೌಢ ಶಿಕ್ಷಣ), ರವೀಂದ್ರ ಯಾದವ್ (ಬಿಇಒ), ಬಸವರಾಜ ಕಲೋಜಿ (ಹಿಂದುಳಿದ ವರ್ಗ), ಹಸನ್ ಚಾವುಸ್ (ಅಲ್ಪಸಂಖ್ಯಾತರ ಕಲ್ಯಾಣ), ಡಾ.ವೇಣುಗೋಪಾಲರೆಡ್ಡಿ (ಆಯುಷ್), ಕಂಠೆಪ್ಪ (ಸಾರ್ವಜನಿಕ ಆಸ್ಪತ್ರೆ), ಮಲ್ಲಪ್ಪ (ತೋಟಗಾರಿಕೆ), ಅಂಬರೀಷ (ಖಜಾನೆ), ಶ್ರವಣ ಬಿಲಗುಂದಿ (ಭೂಪಾನ), ಶಿವರಾಜಕುಮಾರ (ಕಾರ್ಮಿಕ), ಪ್ರಕಾಶ ಗೊಣಗಿ (ನ್ಯಾಯಾಂಗ), ಕ್ಯಾದಿಗೆಪ್ಪ, ದೇವಿಂದ್ರನಾಯಕ (ತಾಲೂಕು ಪಂಚಾಯಿತಿ), ಅಶೋಕ (ಎಪಿಎಮ್‌ಸಿ), ಸತ್ಯನಾರಾಯಣ (ಆಹಾರ ಮತ್ತು ನಾಗರಿಕ ಸೇವಾ), ಮಲ್ಲಿಕಾರ್ಜುನ (ಸಹಕಾರ), ದೇವಪ್ಪ (ಸಹಾಯಕ ಆಯುಕ್ತರ ಕಚೇರಿ). ಪಿಎಸ್‌ಐ ಮಂಜುನಾಥರೆಡ್ಡಿ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net