

ವಿರಾಜಪೇಟೆ: ವಿರಾಜಪೇಟೆ ಮಲೆತಿರಿಕೆ ಕೊಡವ ಸಂಘದ ವಾರ್ಷಿಕ ಮಹಾಸಭೆ ರೋಟರಿ ಸಭಾಂಗಣದಲ್ಲಿ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
19 ವರ್ಷಗಳಿಂದ ಸಂಘವನ್ನು ಮುನ್ನಡೆಸಿಕೊಂಡು ಬರಲಾಗಿದೆ. ಕೊಡವ ಸಂಘಗಳು ಕೊಡವರ ಏಳಿಗೆಗಾಗಿ ಶ್ರಮಿಸಬೇಕು. ಒಗ್ಗಟ್ಟು ಹಾಗು ಸಹಕರಿಸುವ ಮನೋಭಾವ ನಮ್ಮಲ್ಲಿರಬೇಕು. ನಾನು ಎನ್ನದೆ ನಾವು ಎಂದು ಕೆಲಸ ನಿರ್ವಹಿಸಿದರೆ ಸಂಘವು ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಉಮೇಶ್ ಮುತ್ತಣ್ಣ ಹೇಳಿದರು.
ಸಂಘದ ಸದಸ್ಯರು ಮತ್ತು ಕುಟುಂಬ ವರ್ಗದವರಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಾಜಿ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಮಾಜಿ ಉಪಾಧ್ಯಕ್ಷೆ ತೀತಿರ ಮಣಿ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ಮೇಕೇರಿರ ಪಾಲಿ ಅಯ್ಯಪ್ಪ, ಪುಗ್ಗೆರ ಶಶಿ ಪೊನ್ನಪ್ಪ, ಕಾರ್ಯದರ್ಶಿ ಮಾದೇಯಂಡ ಹ್ಯಾರಿ ಇತರರು ಉಪಸ್ಥಿತರಿದ್ದರು.