ಶ್ರೀಮಂಗಲ: ಪೊನ್ನಂಪೇಟೆ ಕೊಡವ ಸಮಾಜದಿಂದ ಕೊಡವ ಜಾನಪದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉಚಿತವಾಗಿ ಕೊಡವ ಆಟ್‌ಪಾಟ್, ಪಡಿಪು ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ತಿಳಿಸಿದ್ದಾರೆ.
ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಸಂಸ್ಥೆಯಲ್ಲಿ ನ. 1ರಿಂದ ಸಂಜೆ 5 ಗಂಟೆಗೆ ಪ್ರತಿದಿನ ಆಟ್‌ಪಾಟ್ ಪಡಿಪು ಶಿಬಿರ ನಡೆಯಲಿದೆ. ಆಸಕ್ತರು ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ಅಥವಾ ನೇರವಾಗಿ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಿ ಹೆಸರು ನೋಂದಾಯಿಸುವಂತೆ ಅವರು ತಿಳಿಸಿದ್ದಾರೆ.