ಕೊಡಗು ಹೆಗ್ಗಡೆ ಸಮಾಜದ ಕಚೇರಿ ಉದ್ಘಾಟನೆ

18 gkp 01
Published on

ಗೋಣಿಕೊಪ್ಪ: ಬಿಟ್ಟಂಗಾಲದಲ್ಲಿರುವ ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿ ಕಚೇರಿಯನ್ನು ಶನಿವಾರ ಗಣಪತಿ ಹೋಮ ಮಾಡಿ ಉದ್ಘಾಟಿಸಲಾಯಿತು.

ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿರುವುದರಿಂದ ಹಂತ, ಹಂತವಾಗಿ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಜನಾಂಗದ ಮೇಲಿನ ಅಭಿಮಾನ ಮುಖ್ಯ ಎಂದರು.

ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ಪಡಿಞರಂಡ ಪ್ರಭುಕುಮಾರ್, ಚರ್ಮಂಡ ಅಪ್ಪುಣು ಪೂವಯ್ಯ, ಮೂರೀರ ಕುಶಾಲಪ್ಪ, ಕೊಪ್ಪಡ ಪಳಂಗಪ್ಪ, ಕೊಂಗೆಪಂಡ ರವಿ, ಪದಿಕಂಡ ಸುನಾ, ಕೊಕ್ಕೇರ ಜಗನ್ನಾಥ, ಪುದಿಯತಂಡ ಜಾಗನಾಥ್, ಮುರೀರ ಶಾಂತಿ, ಪ್ರಮುಖರಾದ ಮಲ್ಲಾಡ ಕಟ್ಟಿ ಪೂಣಚ್ಚ ಕೊರಕುಟ್ಟಿರ ಮೀನ, ಕವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net