ಕೊಡಗು ಜಿಲ್ಲೆಯ ಟಾಪರ್ ಬ್ರಿಜೇಶ್‌ಗೆ ಸನ್ಮಾನ

24Kush01
Published on


ಕುಶಾಲನಗರ: ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಗಳಿಸಿ ಪಡೆದ ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕೆ. ಬ್ರಿಜೇಶ್ ನಿರಂಜನ್‌ರನ್ನು ಕಾಲೇಜು ವತಿಯಿಂದ ಸೋಮವಾರ ಕಾಲೇಜು ಆವರಣದಲ್ಲಿ ಸನ್ಮಾನಿಸಲಾಯಿತು.


ಕನ್ನಡದಲ್ಲಿ 100ಕ್ಕೆ 98, ಇಂಗ್ಲೀಷ್ 97, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 97, ಗಣಿತ, ಜೀವಶಾಸ್ತ್ರದಲ್ಲಿ ತಲಾ 100 ಅಂಕ ಸೇರಿ 600 ಅಂಕಗಳಿಗೆ 591 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗ ಮತ್ತು ರಾಜ್ಯಕ್ಕೆ ಆರನೇ ಸ್ಥಾನದಲ್ಲಿದ್ದಾನೆ.


ನೀಟ್ ಕೋಚಿಂಗ್ ತೆಗೆದುಕೊಂಡಿರುವ ಈತ ಪಿಯು ನಂತರ ಮೆಡಿಕಲ್ ವ್ಯಾಸಾಂಗದತ್ತ ಒಲವು ಹೊಂದಿದ್ದು, ಈತ ಕುಶಾಲನಗರದ ಕುದುಪಜೆ ನಿರಂಜನ್ ಹಾಗೂ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿರುವ ಸುಮತಿ ದಂಪತಿ ಪುತ್ರ.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪಿಯು ವಿಭಾಗದ ಪ್ರಾಂಶುಪಾಲರಾದ ಕ್ಲಾರಾ ರೇಷ್ಮಾ, ಮಹಾತ್ಮ ಗಾಂಧಿ ಕಾಲೇಜು ಪದವಿ ವಿಭಾಗದ ಪ್ರಾಂಶುಪಾಲರಾದ ಲಿಖಿತಾ, ಮಂಗಳೂರಿನ ರಸಾಯನ ಶಾಸ್ತ್ರ ಪ್ರೊ.ಡಾ.ರಾಕೇಶ್, ಕಾಲೇಜು ಟ್ರಸ್ಟಿ ನಂಜಪ್ಪ ಹಾಗೂ ಉಪನ್ಯಾಸಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net