ಕೊಡಗಿನ ವೈದ್ಯಕೀಯ ವಿದ್ಯಾರ್ಥಿ ಭದ್ರಾವತಿಯಲ್ಲಿ ಸಾವು

19ss1jagath
Published on

ಶನಿವಾರಸಂತೆ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಕೊಡಗು ಜಿಲ್ಲೆಯ ವಿದ್ಯಾರ್ಥಿ ಶನಿವಾರ ಅಲ್ಲಿನ ನದಿಯೊಂದರಲ್ಲಿ ಮುಳುಗಿ ಮೃತಪಟ್ಟಿದ್ದು, ಭಾನುವಾರ ಮೃತದೇಹವನ್ನು ಶನಿವಾರಸಂತೆಗೆ ತಂದು ಅಂತ್ಯಸಂಸ್ಕಾರ ಮಾಡಲಾಯಿತು.

ಸೋಮವಾರಪೇಟೆ ತಾಲೂಕು ಗುಡುಗಳಲೆಯಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕ ರವಿ ಮತ್ತು ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ನಳಿನಿ ದಂಪತಿಯ ಪುತ್ರ ಜಗತ್ (22) ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ.

ಭದ್ರಾವತಿಯ ಮೆಡಿಕಲ್ ಕಾಲೇಜೊಂದರಲ್ಲಿ 3ನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಜಗತ್, ಶನಿವಾರ ತರಗತಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸಮೀಪದಲ್ಲೇ ಇದ್ದ ನದಿಗೆ ಈಜಲು ತೆರಳಿದ್ದನು. ಸ್ನೇಹಿತರೊಂದಿಗೆ ಜಲಕ್ರೀಡೆಯಾಡುತ್ತಿದ್ದ ಸಂದರ್ಭದಲ್ಲಿ ಜಗತ್ ನೀರಿನ ಆಳದಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಭಾನುವಾರ ಮಧ್ಯಾಹ್ನ ಶನಿವಾರಸಂತೆಯ ಹಿಂದು ರುದ್ರಭೂಮಿಯಲ್ಲಿ ಜಗತ್‌ನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net