ಕೊಡಗನೂರು ಕೆರೆ ಏರಿಗಿಳಿದ  ಬಸ್ಸು-ಪ್ರಯಾಣಿಕರು ಪಾರು

IMG-20230723-WA0029.jpg
Published on

ದಾವಣಗೆರೆ: ತಾಲೂಕಿನ ಕೊಡಗನೂರು ಕೆರೆ ಏರಿ ಬಳಿ ಭಾನುವಾರ ಬೆಳಗ್ಗೆ ಖಾಸಗಿ ಬಸ್ಸು ಹಾಗೂ ಮಹಿಂದ್ರಾ ಬುಲೆರೋ ನಡುವೆ ಅಪಘಾತ ಸಂಭವಿಸಿದ್ದು ಬಸ್ಸು ಕೆರೆ ಬದಿ ಇಳಿದಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಬಸ್ಸು ದಾವಣಗೆರೆ ಕಡೆಯಿಂದ ಹೊಳಲ್ಕೆರೆಗೆ ಹೊರಟಿತ್ತು. ಆ ಕಡೆಯಿಂದ ಬರುತ್ತಿದ್ದ ಬುಲೆರೋ ನಡುವೆ ಡಿಕ್ಕಿಯಾಗಿದೆ. ಬಸ್ಸಿನ ಚಾಲಕ ವಾಹನವನ್ನು ಎಡಕ್ಕೆ ತಿರುವು ಪಡೆದಿದ್ದು ಕೆರೆ ಏರಿಗೆ ಇಳಿದಿದೆ. ನೀರಿಗಿಳಿಯದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಲೆರೋ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎನ್ನಲಾಗಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net