ಕೊಠಡಿಯಲ್ಲಿ ಕಾಣಿಸಿಕೊಂಡ ನಾಗರ ಹಾವು

28 HANUR 4
Published on

ಹನೂರು: ತಾಲೂಕಿನ ಅಜ್ಜೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರಲ್ಲಿ ಇತ್ತೀಚೆಗೆ ಭಾರಿ ಗಾತ್ರದ ನಾಗರಹಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.

ಮಧ್ಯಾಹ್ನ 12.30ರಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಮೋನಿಕಾ ತಟ್ಟೆಗೆ ಬಿಸಿಯೂಟವನ್ನು ಹಾಕಿಸಿಕೊಂಡು ನಲಿಕಲಿ ಕೊಠಡಿಗೆ ಊಟಕ್ಕೆ ತೆರಳಿದಾಗ ತೆರೆದ ಅಲ್ಮೇರಾದಲ್ಲಿ ಅಂದಾಜು ಆರೂವರೆ ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡು ಬುಸುಗುಟ್ಟಿದೆ. ಇದರಿಂದ ಗಾಬರಿಗೊಂಡು ಕಿರುಚುತ್ತಾ ಕೊಠಡಿಯಿಂದ ಹೊರ ಬಂದ ಮೋನಿಕಾ ವಿಷಯವನ್ನು ಶಿಕ್ಷಕರಿಗೆ ತಿಳಿಸಿದ್ದಾಳೆ.

ಶಿಕ್ಷಕರು ಗ್ರಾಮದ ಸ್ನೇಕ್ ಮಧುಗೆ ಮಾಹಿತಿ ನೀಡಿ, ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸಮೀಪದ ಮಲೆಮಹದೇಶ್ವರ ವನ್ಯಜೀವಿ ವಲಯದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net