ಕೊಟ್ಪಾ ಕಾಯ್ದೆಯಡಿ 2,010 ರೂ. ದಂಡ ವಸೂಲಿ

28 tth 02
??????
Published on

ತೀರ್ಥಹಳ್ಳಿ: ಶಾಲಾಕಾಲೇಜು ಆವರಣದ ನೂರು ಗಜದ ಅಂತರದೊಳಗೆ ಸಿಗರೇಟು, ಗುಟ್ಕಾ ಮತ್ತಿತರೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದುದ್ದನ್ನು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿದ್ದವರಿಗೆ ಕೊಟ್ಪಾ ಕಾಯ್ದೆಯಡಿ ಒಟ್ಟು 37 ಪ್ರಕರಣ ದಾಖಲಿಸಿಕೊಂಡು 2,010 ರೂ. ದಂಡ ವಸೂಲಿ ಮಾಡಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ ನೇತೃತ್ವದಲ್ಲಿ ಪಟ್ಟಣದ ವಿವಿಧಅಂಗಡಿ ಮೇಲೆ ದಾಳಿ ನಡೆಸಲಾಯಿತು. ಸೆಕ್ಷನ್ 4ರ ಸೂಚನಾ ಫಲಕ ವಿತರಿಸಲಾಯಿತು. ಬೆಜ್ಜವಳ್ಳಿಪೇಟೆಯಲ್ಲೂ 27 ಪ್ರಕರಣ ದಾಖಲಿಸಿ 970 ರೂ. ದಂಡ ವಿಧಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಕ ಎ.ಎಂ.ಜಗದೀಶ, ಜಿಲ್ಲಾ ಸಲಹೆಗಾರರಾದ ಹೆಮಂತರಾಜ್ ಅರಸ್, ರವಿರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net