ಕೊಟ್ಟೂರು ಮಾರ್ಗದಲ್ಲಿ ಸ್ವಚ್ಛತಾ ಕಾರ್ಯ

23. HBH 4.,
Published on

ಹಗರಿಬೊಮ್ಮನಹಳ್ಳಿ: ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ಅಂಗವಾಗಿ ಕೊಟ್ಟೂರಿಗೆ ಭಕ್ತರು ಪಾದಯಾತ್ರೆ ಕೈಗೊಂಡ ವೇಳೆ ಮಾರ್ಗದಲ್ಲಿ ಊಟ, ಉಪಹಾರ ಸೇರಿದಂತೆ ಹಲವು ರೀತಿಯಲ್ಲಿ ಜನರು ಸೇವೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಉಂಟಾದ ತ್ಯಾಜ್ಯವನ್ನು ಪುರಸಭೆ ಪೌರಕಾರ್ಮಿಕರೊಂದಿಗೆ ಶ್ರೀ ರೇಣುಕಾ ಹಾಗು ರಾಷ್ಟ್ರೋತ್ಥಾನ ಶಾಲೆಗಳ ವಿದ್ಯಾರ್ಥಿಗಳು ನಂದಿಪುರದ ಡಾ.ಮಹೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಶನಿವಾರ ಕೈಗೊಂಡರು.

ಹಣ್ಣಿನ ಸಿಪ್ಪೆ, ನೀರಿನ ಬಾಟಲ್, ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಸಂಗ್ರಹಿಸಲಾಯಿತು. ರೇಣುಕಾ ಶಾಲೆಯ ಮುಖ್ಯಸ್ಥೆ ಇಂದುಮತಿ, ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಸವನಗೌಡ, ಶ್ರೀಶೈಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net