44ನೇ ವರ್ಷದ ಪಾದಯಾತ್ರೆ ಇದಾಗಿದೆ. 25 ಸಾವಿರ ಪಾದಯಾತ್ರಿಗಳು ಸುಮಾರು 65ಕಿಮೀ ದೂರದವರೆಗೆ ಕ್ರಮಿಸುವರು ಎಂದು ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾದಯಾತ್ರೆ ಮಾರ್ಗದ ಹಳ್ಳಿಗಳಲ್ಲಿ ಭಕ್ತರಿಂದ ಪ್ರಸಾದ ಹಾಗೂ ತಜ್ಞ ವೈದ್ಯರು, ಶುಶ್ರೂಷಕರು ಹಾಗೂ ಔಷಧ ತಜ್ಞರಿಂದ ವೈದ್ಯಕೀಯ ಸೇವೆ ನಡೆಯಲಿದೆ ಎಂದು ಹೇಳಿದರು.
ಫೆ. 13 ರ ಸಂಜೆ 5 ಗಂಟೆಗೆ ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನದಲ್ಲಿ ಬೀಳ್ಕೊಡುಗೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಹೆಬ್ಬಾಳ್‌ನ ಮಹಾಂತ ರುದ್ರೇಶ್ವರ ಶ್ರೀ ಅಯ್ಯನಹಳ್ಳಿಯ ಮಹೇಶ್ವರ ಶಿವಾಚಾರ್ಯ ಶ್ರೀ. ಕೊಟ್ಟೂರು ಶಂಕರ ಶ್ರೀ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶ್ರೀಗಳು ಸಾನ್ನಿಧ್ಯವನ್ನು ಹಾಗೂ ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯ ಅಜಯ್ ಕುಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಲ್ಲಾಬಾದಿ ಗುರುಬಸವರಾಜ್, ಬಿ.ಚಿದಾನಂದ, ಸಿ.ಆರ್.ಜಯರಾಜ್, ಜೋಳದ ಕೊಟ್ರಪ್ಪ, ಕಂಬಿನೂಲು ರುದ್ರಕುಮಾರ್, ಬೂಸನೂರು ಸುಜಾತಾ, ವಿನುತಾ ರವಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಫೆ.14 ರಂದು ಸಂಜೆ 4 ಗಂಟೆಗೆ ಆರಸೀಕೆರೆ ಶ್ರೀ ಗುರು ಕೋಲಶಾಂತೇಶ್ವರ ವಿರಕ್ತಮಠದಲ್ಲಿ ಶಾಂತಲಿಂಗ ದೇಶಿಕೇಂದ ಶ್ರೀ ಹಾಗೂ ಡಾ.ಮಹೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ 25ನೇ ವರ್ಷದ ಔಷಧೋಪಚಾರದ ಸೇವೆಯ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.